ಆತ್ಮಾಭಿಮಾನ, ದೇಶಾಭಿಮಾನ ಬೆರೆತಾಗಲೇ ರಾಷ್ಟ್ರಭಕ್ತಿಯಲ್ಲಿ ಬೆಳಕು : ಶ್ರೀಕಾಂತ್ ಶೆಟ್ಟಿ
ಬಂಟ್ವಾಳ: ಆತ್ಮಾಭಿಮಾನ,ದೇಶಾಭಿಮಾನ ಸಂಪೂರ್ಣವಾಗಿ ಬೆರೆತಾಗಲೇ ರಾಷ್ಟ್ರಭಕ್ತಿಯಲ್ಲಿ ಬೆಳಕು ಹೊರಡುತ್ತದೆ ಎಂಬ ಶಾಸ್ತ್ರೀಜಿಯವರ ನುಡಿಮುತ್ತುಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ ಎಂದು ಪತ್ರಕರ್ತ ಶ್ರೀಕಾಂತ್ ಶೆಟ್ಟಿ ಕಾರ್ಕಳ ಅವರು ಹೇಳಿದ್ದಾರೆ.

ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ ಸ್ವದೇಶೀ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅಭ್ಯಾಗತರಾಗಿ ಭಾಗವಹಿಸಿದ್ದ ಅವರು “ಲಾಲ್ ಬಹಾದ್ದೂರ್ ಶಾಸ್ತ್ರೀಯವರ ಪ್ರೇರಣಾದಾಯಿ ಬದುಕು” ಎಂಬ ವಿಷಯದ ಕುರಿತು ಮಾತನಾಡಿದರು.
ಶಾಸ್ತ್ರೀಜಿ ಯವರ ಸರಳ ವ್ಯಕ್ತಿತ್ವ ರಾಜಕೀಯ ಜೀವನ,ಶತ್ರು ರಾಷ್ಟ್ರಗಳನ್ನು ಎದುರಿಸಿದ ಅಕ್ರಮಣಾಕಾರಿ ಚಾಣಾಕ್ಷತನ,ಸ್ವತಂತ್ರವಾದ ದೇಶಕ್ಕೆ ಪೂರಕವಾದ ವಿದೇಶಾಂಗ ನೀತಿಯ ರಚನೆಯಲ್ಲಿ ಅವರ ಪಾತ್ರ ಮುಂತಾದ ಅವರ ಸಾಧನೆಗಳಲ್ಲದೆ,ನಾವು ಸತ್ಯ,ಶಾಂತಿ,ಅಹಿಂಸೆಯ ಹಾದಿಯಲ್ಲಿ ನಡೆಯುವ ಸತ್ಯಾಗ್ರಹಿಗಳಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾಕೇಂದ್ರದ ಆಡಳಿತ ಮಂಡಳಿಯ ಸದಸ್ಯೆ ಮಲ್ಲಿಕಾ ಶೆಟ್ಟಿ ವಹಿಸಿದ್ದರು.ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ರಸಾದ್ ಕಾಯರ್ಕಟ್ಟೆ,ಭವಿಷ್ ಘಟಕದ ನಿರ್ದೇಶಕಿ ಸಹನಾ. ಟಿ.,ಉಪನ್ಯಾಸಕರು,ವಿದ್ಯಾರ್ಥಿಗಳು ಭಾಗವಸಿದ್ದರು.
ವಿದ್ಯಾರ್ಥಿಗಳಾದ ಅಕ್ಷಯ ನರಸಿಂಹ ಪ್ರಾರ್ಥಿಸಿದರು,ಶ್ರೇಯ ಸ್ವಾಗತಿಸಿ,ಸ್ವಾತಿಲಕ್ಷ್ಮಿ ವಂದಿಸಿದರು,ಪದ್ಮಶ್ರೀ ಕಾರ್ಯಕ್ರಮ ನಿರೂಪಿಸಿದರು.