ಕೇಂದ್ರ ಸರಕಾರದ ನಿಕ್ಷಯ್ ಮಿತ್ರ ಯೋಜನೆಯಡಿ ಕ್ಷಯ ರೋಗಿಗಳಿಗೆ ದವಸ ಧಾನ್ಯಗಳ ಆಹಾರದ ಕಿಟ್ ವಿತರಣೆ
ಬಂಟ್ವಾಳ: ಕಳೆದ ಒಂದು ವರ್ಷದಿಂದ ಸೇವಾಂಜಲಿ ಸಂಸ್ಥೆಯು ದಾನಿಗಳ ಸಹಕಾರದೊಂದಿಗೆ ನಿರಂತರವಾಗಿ ಕ್ಷಯ ರೋಗಿಗಳಿಗೆ ಸಮತೋಲನ ಆಹಾರದ ಕಿಟ್ ನೀಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಜಿಲ್ಲಾ ಕ್ಷಯ ರೋಗ ನಿರ್ಮೂಲನಾಧಿಕಾರಿ ಡಾ. ಬದ್ರುದ್ದೀನ್ ಹೇಳಿದರು.
ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಇದರ ಆಶ್ರಯದಲ್ಲಿ ಗುರುವಾರ ಸೇವಾಂಜಲಿ ಸಭಾಗ್ರಹದಲ್ಲಿ ಕೇಂದ್ರ ಸರಕಾರದ ನಿಕ್ಷಯ್ ಮಿತ್ರ ಯೋಜನೆಯಡಿ ಕ್ಷಯ ರೋಗಿಗಳಿಗೆ ದವಸ ಧಾನ್ಯಗಳ ಆಹಾರದ ಕಿಟ್ ವಿತರಿಸಿ ಅವರು ಮಾತನಾಡಿದರು.ಕ್ಷಯ ರೋಗಿಗಳಲ್ಲಿ ಪ್ರೋಟಿನ್ ಅಂಶ ಹೆಚ್ಚಿಸುವ ಉದ್ದೇಶದಿಂದ ಸಮತೋಲನ ಆಹಾರವನ್ನು ನೀಡಲಾಗುತ್ತದೆ.ಆದ್ದರಿಂದ ಕ್ಷಯರೋಗಿಗಳು ಈ ಆಹಾರವನ್ನು ಸೇವಿಸಿ ಆರೋಗ್ಯ ಉತ್ತಮ ಪಡಿಸುವಂತೆ ತಿಳಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ತುಂಬೆ ವಲಯದ ಮೇಲ್ವಿಚಾರಕಿ ಮಮತಾ ಮಾತನಾಡಿ ಸೇವಾಂಜಲಿ ಪ್ರತಿಷ್ಠಾನದ ಮೂಲಕ ಕೃಷ್ಣಕುಮಾರ್ ಪೂಂಜಾ ಅವರು ನಿರಂತರವಾಗಿ ಸೇವಾ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ.ಕ್ಷಯ ರೋಗಿಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಅವರನ್ನು ಗುರುತಿಸಿ ದವಸ ಧಾನ್ಯಗಳ ಕಿಟ್ ನೀಡುತ್ತಿದ್ದಾರೆ.ಇದನ್ನು ಕ್ಷಯರೋಗಿಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಹಿರಿಯ ಆರೋಗ್ಯ ನಿರೀಕ್ಷಕ ನಟೇಶ್,ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಫರಂಗಿಪೇಟೆ ಒಕ್ಕೂಟದ ಅಧ್ಯಕ್ಷ ಸುಕೇಶ್ ಶೆಟ್ಟಿ ತೇವು, ಉದ್ಯಮಿ ಮಹಮ್ಮದ್ ಇಕ್ಬಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ತಾಲೂಕು ಕ್ಷಯ ರೋಗ ಮೇಲ್ವಿಚಾರಕ ಡೇವಿಡ್ ಡಿಸೋಜಾ,ಕೃಷ್ಣಮೂರ್ತಿ,ಸೇವಾಂಜಲಿ ಟ್ರಸ್ಟಿಗಳಾದ ಭಾಸ್ಕರ ಚೌಟ ಕುಮ್ಡೇಲು,ಸುರೇಶ್ ರೈ ಪೆಲಪಾಡಿ,ನಾರಾಯಣ ಬಿ. ಮೇರಮಜಲು,ಸುಕುಮಾರ್ ಅರ್ಕುಳ,ಕೇಶವ ದೋಟ ಪ್ರಮುಖರಾದ ವಿಕ್ರಂ ಬರ್ಕೆ,ಎಂ.ಕೆ.ಖಾದರ್,ಪ್ರಶಾಂತ್ ತುಂಬೆ,ಮೋಹನ ಬೆಂಜನಪದವು,ಚಂದ್ರಹಾಸ ಕಡೆಗೋಳಿ,ರಾಮದಾಸ್ ತೇವು ಕಾಡು,ಸಾರ ಮೊಯ್ದೀನ್,ಬಾಲಕೃಷ್ಣ ದೇವಸ್ಯ,ಬಾಬು ದೆಕ್ಕದು, ಮಧುರಾಜ್ ಶೆಟ್ಟಿ,ಆರ್ ಎಸ್. ಜಯ ಹಾಗೂ ಆಶಾಕಾರ್ಯಕರ್ತೆಯರು ಉಪಸ್ಥಿತರಿದ್ದರು.
ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜಾ ಸ್ವಾಗತಿಸಿ,ವಂದಿಸಿದರು.ಟ್ರಸ್ಟಿ ಕೊಡ್ಮಾನ್ ದೇವದಾಸ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.