ಬಂಟರ ಸಂಘ ಬಿ.ಸಿ ರೋಡು ವಲಯದಿಂದ “ಕೆಸರ್ದ ಕಂಡೊಡು ಕೆಸರ್ದ ಗೊಬ್ಬು”
ಬಂಟ್ವಾಳ: ಕೃಷಿ ಪರಂಪರೆಯ ಈ ಕೂಟವನ್ನು ಪ್ರಸಕ್ತ ಕಾಲದಲ್ಲಿ ನಡೆಸುತ್ತಿರುವುದು ಸ್ತುತ್ಯಾರ್ಹವಾಗಿದೆ.ಬಂಟ ಸಮಾಜ ಎಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಒಗ್ಗಟ್ಟಾಗಬೇಕು ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ ಉಳಿಪ್ಪಾಡಿಗುತ್ತು ಹೇಳಿದ್ದಾರೆ.
ಬಿ.ಸಿ.ರೋಡು ಸ್ಪರ್ಶಾ ಕಲಾ ಮಂದಿರದಲ್ಲಿ ಬಂಟರ ಸಂಘ ಬಿ.ಸಿ ರೋಡು ವಲಯದ ವತಿಯಿಂದ “ಕೆಸರ್ದ ಕಂಡೊಡು ಕೆಸರ್ದ ಗೊಬ್ಬು” ಬಂಟ್ವಾಳ ತಾಲೂಕು ಮತ್ತು ವಲಯ ಮಟ್ಟದ ಸ್ಪರ್ಧೆಯಲ್ಲಿ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಪ್ರಗತಿಪರ ಕೃಷಿಕರಾದ ವಿಶ್ವನಾಥ ಶೆಟ್ಟಿ ಮಡ್ಯಾರುಗುತ್ತು ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.ದಿವಾಕರ ಶೆಟ್ಟಿ ಪರಾರಿಗುತ್ತು ಅಧ್ಯಕ್ಷತೆ ವಹಿಸಿದ್ದರು,ಮುಖ್ಯ ಅತಿಥಿಗಳಾಗಿ ನ್ಯಾಯವಾದಿ ಆಶ್ವಿನಿ ಕುಮಾರ್ ರೈ,ಉದ್ಯಮಿಗಳಾದ ಹರೀಶ್ ಶೆಟ್ಟಿ ತುಂಬೆ ಬಂಟ್ವಾಳ,ಐತಪ್ಪ ಆಳ್ವ ಸುಜೀರು ಗುತ್ತು,ಪುರಸಭಾ ಸದಸ್ಯ ರಾಮ ಕೃಷ್ಣ ಆಳ್ವ ಪೊನ್ನೋಡಿ,ಜಯಂತ್ ಶೆಟ್ಟಿ,ಶೋಭಾ ವಿ. ಹೆಗ್ಡೆ,ಯಶವಂತ್ ಶೆಟ್ಟಿ,ರಶ್ಮಿತ್ ಶೆಟ್ಟಿ ಉಪಸ್ಥಿತರಿದ್ದರು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮಾಜಿ ಸಚಿವ ಬಿ. ರಮಾನಾಥ ರೈಯವರು ಮಾತನಾಡಿ,ಬಂಟ ಕುಟುಂಬ ಕಸುಬು ಕೃಷಿ ಮೂಲ ಪರಂಪರೆಯನ್ನು ಅನಾದಿ ಕಾಲದಿಂದಲೂ ನಿರ್ವಹಿಸಿಕೊಂಡು ಬರುತಿದ್ದರು,ಕೆಸರ ಕಂಡೊಡು ಬಂಟೆರೆ ಗೊಬ್ಬು ಮಾಡುವ ಮೂಲಕ ಬಂಟ ಸಮಾಜದ ಮೂಲ ಕೃಷಿ ಪರಂಪರೆಯನ್ನು ನೆನಪಿಸಿಕೊಳ್ಳುವ ಹಾಗೂ ಭಾವನೆಗಳನ್ನು ಹಂಚಿಕೊಳ್ಳವ ಒಳ್ಳೆಯ ಕಾರ್ಯಕ್ರಮ ಆಗಿರುತ್ತದೆ ಎಂದು ಹೇಳಿದರು.
ದಿವಾಕರ ಶೆಟ್ಟಿಯವರು ಅಧ್ಯಕ್ಷತೆ ವಹಿಸಿದರು.ಬಂಟವಾಳ ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ಡಿ ಶೆಟ್ಟಿ,ಕಾರ್ಯದರ್ಶಿ ಜಗನ್ನಾಥ ಚೌಟ ಬದಿಗುಡ್ಡೆ,ಲೋಕೇಶ್ ಶೆಟ್ಟಿ ಕುಳ,ರಮಾ ಎಸ್ ಭಂಡಾರಿ,ಜಗನ್ನಾಥ ರೈ ಮೇರಾವು,ಶಂಕರ್ ಶೆಟ್ಟಿ ನಡ್ಕೊಡಿ,ನಾಗೇಶ್ ಶೆಟ್ಟಿ ತುಂಬೆ ಬಂಟ್ವಾಳ, ಯಶವಂತ ಶೆಟ್ಟಿ,ತಿಮ್ಮಯ್ಯ ಶೆಟ್ಟಿ,ಕರುಣಾಕರ ಶೆಟ್ಟಿ,ಶೋಭಾ ವಿ. ಹೆಗ್ಡೆ,ಭವಿಷ್ ಶೆಟ್ಟಿ ಉಪಸ್ಥಿತರಿದ್ದರು.
ಇದೇವೇಳೆ ವಲಯದ ಬಂಟ ಸಮಾಜದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ,ಪ್ರತಿಭಾ ಪುರಸ್ಕಾರ ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಿದ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಸಜೀಪ ವಲಯ ಪ್ರಥಮ:
ತಾಲೂಕು ಮಟ್ಟದ ಪುರುಷರ ಹಗ್ಗಜಗ್ಗಾಟದಲ್ಲಿ ಪ್ರಥಮ ಸಜೀಪ ವಲಯ,ದ್ವಿತೀಯ ವಿಟ್ಲ ವಲಯ,ಮಹಿಳಾ ವಿಭಾಗದ ಹಗ್ಗ ಜಗ್ಗಾಟದಲ್ಲಿ ಪ್ರಥಮ ಫರಂಗಿಪೇಟೆ ವಲಯ,ದ್ವಿತೀಯ ಮಾಣಿ ವಲಯ ಗೆದ್ದುಕೊಂಡಿತು.
ಭವಿಷ್ಯ ಶೆಟ್ಟಿ ಸ್ವಾಗತಿಸಿ,ರತ್ನಾ ಆಳ್ವ ವಂದಿಸಿದರು,ಸತೀಶ್ ಶೆಟ್ಟಿ ಮೊಡಂಕಾಪುಗುತ್ತು ಹಾಗೂ ಮಣಿಮಾಲ ಬಿ. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.