ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಧನ ಸಹಾಯ ವಿತರಣೆ
ಬಂಟ್ವಾಳ: ಶ್ರೀ.ಕ್ಷೇ.ಧ.ಗ್ರಾಮಭಿವೃದ್ಧಿ ಯೋಜನೆಯಿಂದ ಪಾಶ್ವ೯ ವಾಯು ಕಾಯಿಲೆಯಿಂದ ಬಳಲುತ್ತಿರುವ ಬಂಟ್ವಾಳ ತಾಲೂಕಿನ ಕೇಂದ್ರ ಒಕ್ಕೂಟದ ಮಾಜಿ ಅಧ್ಯಕ್ಷ ಮಾಧವ ವಳವೂರು ಸಹಿತ ಇಬ್ಬರಿಗೆ ಚಿಕಿತ್ಸಾ ವೆಚ್ಚಕ್ಕಾಗಿ ಸಹಾಯಧನ ವಿತರಿಸಲಾಯಿತು.
ಮಾಧವ ವಳವೂರು ಅವರಿಗೆ 20 ಸಾ.ರೂ. ಹಾಗೂ ತುಂಬೆ ಕಾರ್ಯಕ್ಷೇತ್ರದ ಸರಸ್ವತಿ ಸಂಘದ ಸದಸ್ಯೆ ಸುಕನ್ಯಾ ಅವರಿಗೆ ಪಾಶ್ವ೯ ವಾಯು ಚಿಕಿತ್ಸೆಗಾಗಿ 25 ಸಾ.ರೂ. ಮೊತ್ತವನ್ನು ಯೋಜನೆಯ ಬಂಟ್ವಾಳ ತಾಲೂಕಿನ ಯೋಜನಾಧಿಕಾರಿ ಮಾಧವ ಗೌಡ ವಿತರಿಸಿದರು.
ಈ ಸಂದರ್ಭ ತುಂಬೆ ವಲಯ ಮೇಲ್ವಿಚಾರಕಿ ಮಮತಾ ಒಕ್ಕೂಟದ ಉಪಾಧ್ಯಕ್ಷ ವಸಂತಿ,ಸದಸ್ಯರುಗಳಾದ ಸುಶೀಲ,ರೋಹಿನಿ ಹಾಗೂ ತುಂಬೆ ವಲಯದ ತುಂಬೆ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಅನಿತಾ ರವರು ಉಪಸ್ಥಿತರಿದ್ದರು.