ತುಂಬೆ: ಶ್ರೀ ಶಾರದಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ
ಬಂಟ್ವಾಳ: ಶ್ರೀ ಶಾರದಾ ಸೇವಾ ಪ್ರತಿಷ್ಠಾನ ರಿ. ತುಂಬೆ ಇದರ ಆಶ್ರಯದಲ್ಲಿ ನಡೆಯಲಿರುವ 23ನೇ ವರ್ಷದ ಶ್ರೀ ಶಾರದಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಯು ತುಂಬೆ ಶ್ರೀ ಶಾರದಾ ಸಭಾ ಭವನದಲ್ಲಿ ನಡೆಯಿತು.
ಈ ಸಂದರ್ಭ ಶ್ರೀ ಶಾರದಾ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಗಣೇಶ್ ಸುವರ್ಣ ತುಂಬೆ,ಪ್ರಧಾನ ಕಾರ್ಯದರ್ಶಿ ಪ್ರವೀಣ್ ಬಿ ತುಂಬೆ, ಕೋಶಾಧಿಕಾರಿ ಸೋಮಪ್ಪ ಕೋಟ್ಯಾನ್,ಉಪಾಧ್ಯಕ್ಷೆ ಶೋಭಾ ಗೋಪಾಲ್ ಮೈಂದಾನ್,ಶಾರದಾ ಮಹೋತ್ಸವ ಸಮಿತಿ ಅಧ್ಯಕ್ಷ ಜಗದೀಶ್ ಪೂಜಾರಿ ಕುಮ್ಡೇಲ್,ಪ್ರಧಾನ ಕಾರ್ಯದರ್ಶಿ ವಿನೋದ್ ಬೊಳ್ಳಾರಿ,ಕೋಶಾಧಿಕಾರಿ ಮನೋಹರ್ ಕೊಟ್ಟಾರಿ,ಉಪಾಧ್ಯಕ್ಷ ಸದಾನಂದ ಕುಲಾಲ್ ಕೋಡಿಯಡ್ಕ ಸೇರಿದಂತೆ ಪ್ರತಿಷ್ಠಾನದ ಟ್ರಸ್ಟಿಗಳು ಮತ್ತು ಸದಸ್ಯರುಗಳು ಉಪಸ್ಥಿತರಿದ್ದರು.