ಕಲ್ಲಡ್ಕ ಶ್ರೀರಾಮ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ
ಬಂಟ್ವಾಳ: ಆಂಧ್ರಪ್ರದೇಶದ ವಿಜ್ಞಾನ ವಿಹಾರ ಆಂಗ್ಲಮಾಧ್ಯಮ ಶಾಲೆ,ನುಟಕ್ಕಿಯಲ್ಲಿ ನಡೆದ ವಿದ್ಯಾಭಾರತಿ ದಕ್ಷಿಣ ಮಧ್ಯ ಕ್ಷೇತ್ರೀಯ ಗಣಿತ – ವಿಜ್ಞಾನ ಹಾಗೂ ಸಂಸ್ಕೃತಿ ಮಹೋತ್ಸವ ಸ್ಪರ್ಧೆಯಲ್ಲಿ ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಬಾಲ ವರ್ಗದ ಗಣಿತ ಮಾದರಿ ಪ್ರದರ್ಶನದಲ್ಲಿ ಸಮ ಬಹುಭುಜಾಕೃತಿಗಳ ಗುಣಧರ್ಮಗಳ ಮೇಲೆ ಆಧಾರಿತ ಪ್ರದರ್ಶನ ಎಂಬ ವಿಷಯದಲ್ಲಿ ೬ನೇ ತರಗತಿಯ ಭೂಮಿಕಾ ಪ್ರಥಮ ಸ್ಥಾನ ಪಡೆದಿದ್ದಾಳೆ.ಅದೇ ರೀತಿ ಕ್ಷೇತ್ರಫಲ ಹಾಗೂ ಆಯತದ ಮಿತಿಯನ್ನು ಸ್ಪಷ್ಟಗೊಳಿಸುವ ಪ್ರದರ್ಶನ ಎಂಬ ವಿಷಯದಲ್ಲಿ ೬ನೇ ತರಗತಿಯ ರಾಜೇಶ್ವರಿ ಭಟ್ ಪ್ರಥಮ ಸ್ಥಾನ,ಸಂಸ್ಕೃತಿ ಜ್ಞಾನ ರಸಪ್ರಶ್ನೆಯಲ್ಲಿ ೭ನೇ ತರಗತಿಯ ಪ್ರಜ್ಞಾ,ಸಾನ್ವಿ ಕಾಮತ್,ವೈಷ್ಣವಿ ಕಡ್ಯ ಪ್ರಥಮ ಸ್ಥಾನ,ಮಳೆ ನೀರು ಸಂರಕ್ಷಿತ ಆಧಾರಿತ ಪ್ರತಿರೂಪ ಎಂಬ ವಿಷಯದಲ್ಲಿ ೭ನೇ ತರಗತಿಯ ಅಮೂಲ್ಯ ಡಿ ಎಸ್ ಮತ್ತು ೬ನೇ ತರಗತಿಯ ಶ್ರೀನಿಧಿ ಪ್ರಥಮ ಸ್ಥಾನ ಪಡೆದು,ಅಮೃತಸರದಲ್ಲಿ ನಡೆಯುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಇವರಿಗೆ ವಿದ್ಯಾಕೇಂದ್ರದ ಅಧ್ಯಕ್ಷರು,ಸಂಚಾಲಕರು,ಆಡಳಿತ ಮಂಡಳಿ ಸದಸ್ಯರು,ಮುಖ್ಯೋಪಾಧ್ಯಾಯರು,ಅಧ್ಯಾಪಕ ವೃಂದ ಮತ್ತು ಅಧ್ಯಾಪಕೇತರರು ಅಭಿನಂದನೆ ಸಲ್ಲಿಸಿದರು.