Published On: Thu, Oct 5th, 2023

ಅ.8 ರಂದು ಬಂಟ್ವಾಳದಲ್ಲಿ “ಜಾಗೃತ ಹಿಂದೂ ಸಮಾಜೋತ್ಸವ” ಸಾಧ್ವಿ ದೇವಿ ಸರಸ್ವತಿ ಜೀ ಯಿಂದ ದಿಕ್ಸೂಚಿ ಭಾಷಣ

ಬಂಟ್ವಾಳ: ವಿಶ್ವಹಿಂದೂ ಪರಿಷತ್ – ಬಜರಂಗದಳ ಬಂಟ್ವಾಳ ಪ್ರಖಂಡದ ವತಿಯಿಂದ ಬಿ.ಸಿ.ರೋಡಿನ ಬಸ್ತಿಪಡ್ಪು ಶೌರ್ಯ ಮೈದಾನದಲ್ಲಿ ಅ.8 ರಂದು ಸಂಜೆ 4.30 ಗಂಟೆಗೆ  “ಜಾಗೃತ ಹಿಂದೂ ಸಮಾಜೋತ್ಸವ” ಕಾರ್ಯಕ್ರಮ ನಡೆಯಲಿದೆ ಎಂದು ವಿಶ್ವ ಹಿಂದೂ ಪರಿಷತ್ ಬಂಟ್ವಾಳ ಪ್ರಖಂಡದ ಅಧ್ಯಕ್ಷ ನ್ಯಾಯವಾದಿ ಪ್ರಸಾದ್ ಕುಮಾರ್ ರೈ ತಿಳಿಸಿದ್ದಾರೆ.

ಮಂಗಳವಾರ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ‌ ಈ ಬಗ್ಗೆ ಮಾಹಿತಿ ನೀಡಿದ ಅವರು,ಈಗಾಗಲೇ  ಚಿತ್ರದುರ್ಗದಲ್ಲಿ ಚಾಲನೆಗೊಂಡು ಹೊರಟಿರುವ ಶೌರ್ಯ ಜಾಗರಣ ರಥಯಾತ್ರೆ ಅ.8 ರಂದು ಬಂಟ್ವಾಳಕ್ಕೆ ಆಗಮಿಸಲಿದ್ದು,ಅಂದು ಮಧ್ಯಾಹ್ನ ಮಾಣಿಯಲ್ಲಿ ರಾ.ಹೆ.ಯನ್ನು ಪ್ರವೇಶಿಸಲಿದ್ದು,ಅಲ್ಲಿ ರಥಯಾತ್ರೆಯನ್ನು ಅದ್ದೂರಿಯಾಗಿ ಸ್ವಾಗತಿಸಲಾಗುವುದು ಎಂದರು.

ಮಧ್ಯಾಹ್ನ 3 ಗಂಟೆ ವೇಳೆಗೆ ರಥ ಬಿ.ಸಿ.ರೋಡಿನ ಕೈಕಂಬ ಪೊಳಲಿದ್ವಾರಕ್ಕೆ ತಲುಪಲಿದ್ದು,ಇಲ್ಲಿಂದ ಸಾವಿರಾರು ಹಿಂದೂ ಕಾರ್ಯಕರ್ತರ ಜೊತೆ ವಿವಿಧ ರೀತಿಯ ಆಕರ್ಷಕವಾದ ಶೋಭಾಯಾತ್ರೆ ಮೂಲಕ ಸಮಾಜೋತ್ಸವ ನಡೆಯುವ ಮೈದಾನದಲ್ಲಿ ಸಂಪನ್ನಗೊಳ್ಳಲಿದೆ ಎಂದು ಅವರು ವಿವರಿಸಿದರು.

ಈ ಜಾಗೃತ ಹಿಂದೂ ಸಮಾಜೋತ್ಸವಕ್ಕೆ ವಿ.ಹಿಂ.ಪ. ಬಜರಂಗದಳದ ಕಲ್ಲಡ್ಕ,ವಿಟ್ಲ,ವೇಣೂರು ಘಟಕಗಳು ಸಹಕಾರ ನೀಡಲಿದ್ದು,ಆರ್. ಎಸ್ .ಎಸ್.ನ ಅಧೀನದಲ್ಲಿರುವ ಎಲ್ಲಾ ಪರಿವಾರ ಸಂಘಟನೆಗಳ ಕಾರ್ಯಕರ್ತರು,ಪ್ರಮುಖರು ಈ ಕಾರ್ಯಕ್ರಮದಲ್ಲಿ‌ ಭಾಗವಹಿಸಲಿದ್ದಾರೆ ಎಂದ ಪ್ರಸಾದ್ ಕುಮಾರ್‌ ಸುಮಾರು 50 ಸಾವಿರ ಮಂದಿ ಸೇರುವ ನಿರೀಕ್ಷೆ ಇದ್ದು,ಈ ನಿಟ್ಟಿನಲ್ಲಿ ತಾಲೂಕಿನ ಪ್ರತಿ ಗ್ರಾಮ ಮಟ್ಟದಲ್ಲಿ ಬೈಠಕ್ ನಡೆಸಲಾಗಿದ್ದು,ತರುಣರು ಉತ್ಸಾಹದಿಂದ ಸಭೆಯಲ್ಲಿ ಭಾಗಿಯಾಗಿದ್ದಾರೆ ಎಂದರು.

ಇದೇ ಮೊದಲಿಗೆ ಬಂಟ್ವಾಳಕ್ಕೆ: 

ಕಾರ್ಯಕ್ರಮದಲ್ಲಿ ಪ್ರಖರ ವಾಗ್ಮಿ  ಸಾಧ್ವಿ ದೇವಿ ಸರಸ್ವತಿ ಜೀ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.ಇವರು ಇದೇ ಮೊದಲ ಬಾರಿಗೆ ಬಂಟ್ವಾಳಕ್ಕೆ ಆಗಮಿಸುತ್ತಿದ್ದಾರೆ.2012 ರ ಬಳಿಕ ಬಂಟ್ವಾಳದಲ್ಲಿ ತಾಲೂಕು ಮಟ್ಟದ ಬೃಹತ್ ಹಿಂದೂ ಸಮಾಜೋತ್ಸವ ಈ‌ ಬಾರಿ‌ ನಡೆಯುತ್ತಿದೆ‌ ಎಂದರು.

ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ,ಶ್ರೀಧಾಮ‌ಮಾಣಿಲದ ಮೋಹನದಾಸ  ಸ್ವಾಮೀಜಿ,ಕಣಿಯೂರು ಕ್ಷೇತ್ರದ ಮಹಾಬಲ ಸ್ವಾಮೀಜಿ, ಪೊಳಲಿ ರಾಮಕೃಷ್ಣ ತಪೋವನದ ವಿವೇಕಚೈತ್ಯನ್ಯಾಂದ ಸ್ವಾಮೀಜಿ,ವಿಶ್ವಹಿಂದೂ ಪರಿಷತ್ ದಕ್ಷಿಣ ಪ್ರಾಂತದ ಕಾರ್ಯಧ್ಯಕ್ಷ ಡಾ.ಎಂ.ಬಿ.ಪುರಾಣಿಕ್,ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕ ಸು.ರಾಮಣ್ಣ ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ.ಶೌರ್ಯ ಜಾಗರಣ ರಥಯಾತ್ರೆ ಯ ಸ್ವಾಗತ ಸಮಿತಿ ಅಧ್ಯಕ್ಷರಾಗಿ ಕಾವೇಶ್ವರ ದೇವಸ್ಥಾನದ ಕಾರ್ಯಾಧ್ಯಕ್ಷ ರಘ ಎಲ್ ಶೆಟ್ಟಿ ಅವರನ್ನು ಆಯ್ಕೆಗೊಳಿಸಲಾಗಿದೆ ಎಂದು ತಿಳಿಸಿದರು.

ಯುವಜನಾಂಗವನ್ನು ವ್ಯಸನಗಳಿಂದ ಮುಕ್ತಿಗೊಳಿಸಿ,ಸಂಸ್ಕಾರವನ್ನು ನೀಡಿ ದೇಶಭಕ್ತರನ್ನಾಗಿಸುವುದು,ಹಿಂದೂ ಧರ್ಮ ಮತ್ತು ಸಂಸ್ಕೃತಿಯ ವೇಲಿನ ಗೌರವವನ್ನು ಜಾಗೃತಗೊಳಿಸುವುದು,ಹಿಂದೂ ಯುವಕರಲ್ಲಿ ನಮ್ಮ ಪೂರ್ವಜರ ಮತ್ತು ಹುತಾತ್ಮರ ಜೀವನದ ಬಗ್ಗೆ ಹೆಮ್ಮೆಯ ಭಾವವನ್ನು ಮೂಡಿಸುವುದು.ಅವರ ಪ್ರೇರಣೆಯಿಂದ ಸ್ಫೂರ್ತಿ ಪಡೆದು ಯುವಕರು ದೇಶಕ್ಕಾಗಿ ಬದುಕುವ ಸಂಕಲ್ಪ ಮಾಡಿಸುವುದು ಸಹಿತ ವಿವಿಧ ಉದ್ದೇಶವನ್ನಿರಿಸಿಕೊಂಡು ಶೌರ್ಯ ಜಾಗೃತ ರಥಯಾತ್ರೆ ಮತ್ತು ಹಿಂದೂ ಸಮಾಜೋತ್ಸವವನ್ನು ಆಯೋಜಿಸಲಾಗಿದೆ ಎಂದು ಪ್ರಸಾದ್ ಕುಮಾರ್ ವಿವರಿಸಿದರು.

ಬಜರಂಗದಳ ಪುತ್ತೂರು ಜಿಲ್ಲಾ ಸಂಯೋಜಕ ಭರತ್ ಕುಮ್ಡೆಲು,ಜಿಲ್ಲಾ ಉಪಾಧ್ಯಕ್ಷ ಗುರುರಾಜ್ ಬಂಟ್ವಾಳ,ಕಲ್ಲಡ್ಕ ಪ್ರಖಂಡದ ಅಧ್ಯಕ್ಷ ಸಚಿನ್ ಮೆಲ್ಕಾರ್,ಮಠ ಮಂದಿರಗಳ ಜಿಲ್ಲಾ ಸಂಪರ್ಕ ಪ್ರಮುಖ್ ಪದ್ಮನಾಭ ಕಟ್ಟೆ ವಿಟ್ಲ ಉಪಸ್ಥಿತರಿದ್ದರು

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter