ಲೋರೆಟ್ಟೋ ಪದವಿನಲ್ಲಿ ಉಚಿತ ವೈದ್ಯಕೀಯ ಶಿಬಿರ
ಬಂಟ್ವಾಳ: ಕರ್ನಾಟಕ ರಾಜ್ಯ ಕುಲಾಲ ಕುಂಬಾರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ ಬಂಟ್ವಾಳ ವಿಧಾನ ಸಭಾ ಕ್ಷೇತ್ರ , ಗ್ರೇಸ್ ಪಾಲಿ ಕ್ಲಿನಿಕ್ ಲೋರೆಟ್ಟೋ ಪದವು,ಏ.ಜೆ.ಆಸ್ಪತ್ರೆ ಮಂಗಳೂರು ಇದರ ತಜ್ಞ ವೈದ್ಯರಿಂದ ‘ಉಚಿತ ಸಾರ್ವಜನಿಕ ವೈದ್ಯಕೀಯ ಶಿಬಿರ’ ಬಂಟ್ವಾಳ ಲೋರೆಟ್ಟೋ ಪದವು ಗ್ರೇಸ್ ಕಮರ್ಷಿಯಲ್ ರೆಸಿಡೆನ್ಸಿ ಕಟ್ಟಡದಲ್ಲಿ ನಡೆಯಿತು.
ಲೋರೆಟ್ಟೋ ಚರ್ಚ್ ನ ಧರ್ಮಗುರು ಪ್ರಾನ್ಸಿಸ್ ಕ್ರಾಸ್ತಾ ಅವರು ಶಿಬಿರದ ಉದ್ಘಾಟನೆಗೈದರು.ಅಧ್ಯಕ್ಷತೆಯನ್ನು ವಾಲ್ ಸ್ಟೈಲ್ ನ ಜೋಸ್ಸಿ ಲೋಬೊ,ಬಂಟ್ವಾಳ ತಾಲೂಕು ಆರೋಗ್ಯ ಕೇಂದ್ರದ ವೈದ್ಯರಾದ ಡಾ. ಚೇತನ್ ರಾಜ್,ಕುಲಾಲ ಹಿರಿಯ ನಾಗರಿಕರ ಸಂಘದ ಸೋಮಯ್ಯ ಹನೈನಡೆ,ನಿರ್ಮಲ ಕಾನ್ವೆಂಟ್ ನ ಸಿಸ್ಟರ್ ಇಡೋಲಿನ್ ರೊಡ್ರಿಗಸ್,ಯುವ ವೇದಿಕೆ ಬಂಟ್ವಾಳದ ಅಧ್ಯಕ್ಷ ನಿತೀಶ್ ಕುಲಾಲ್ ಪಲ್ಲಿಕಂಡ ಉಪಸ್ಥಿತರಿದ್ದರು.
ಶಿಬಿರದಲ್ಲಿ ಕಣ್ಣು ತಪಾಸಣೆಗೈದು ಕನ್ನಡಕ ವಿತರಿಸಲಾಯಿತು,ರಿಯಾಯಿತಿ ದರದಲ್ಲಿ ಔಷಧಿ ನೀಡಲಾಯಿತು.ಸುಮಾರು 250 ಕ್ಕೂ ಫಲಾನುಭವಿಗಳು ಇದರ ಪ್ರಯೋಜನ ಪಡೆದರು.ವಿನ್ಸೆಂಟ್ ಸ್ವಾಗತಿಸಿ,ಟಿ. ಶೇಷಪ್ಪ ಮೂಲ್ಯ ವಂದಿಸಿದರು.