ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಗಾಂಧೀ ಜಯಂತಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಹುಟ್ಟು ಹಬ್ಬ ಆಚರಣೆ
ಬಂಟ್ವಾಳ: ರಾಷ್ಟ್ರಪಿತ ಮಹಾತ್ಮ ಗಾಂಧಿಯವರ 154 ನೇ ಜಯಂತಿ ಆಚರಣೆ ಹಾಗೂ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಹುಟ್ಟು ಹಬ್ಬವನ್ನು ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಅವರು ಶಾಂತಿ,ಅಹಿಂಸೆಗಳ ಹರಿಕಾರ, ಸರಳಜೀವಿ,ಪಿತಾಮಹಾ ಗಾಂಧೀಜಿಯವರ ತತ್ವ,ಸಿದ್ಧಾಂತಗಳು ಯುವಕರಿಗೆ ಮಾರ್ಗದರ್ಶಕವಾಗಿರಲಿ ಎಂದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಪಿಯೂಸ್ ಎಲ್ ರೊಡ್ರಿಗಸ್,ಮುಖಂಡರಾದ ವಿಶ್ವನಾಥ ಗೌಡ ಮಣಿ,ಜಗನಾಥ ಬಂಟ್ವಾಳ,ಸುರೇಶ್ ಪೂಜಾರಿ ಜೋರ,ಮನೋಹರ್ ಕುಲಾಲ್ ನೇರಂಬೋಳ್,ವೆಂಕಪ್ಪ ಪೂಜಾರಿ ಬಂಟ್ವಾಳ,ಅಣ್ಣು ಖಂಡಿಗ,ಚಂದ್ರಹಾಸ ನಾಯ್ಕ ಸರಪಾಡಿ, ಲವೀನಾ ವಿಲ್ಮ ಮೋರಸ್,ಮಲ್ಲಿಕಾ ವಿ ಶೆಟ್ಟಿ,ವಲಾ ಬಡ್ಡಕಟ್ಟೆ,ಚಂದ್ರಶೇಖರ್ ಆಚಾರ ಕ್ಕೊಲ,ಪುರುಷೋತ್ತಮ ಪೂಜಾರಿ,ಮಂಡಾಡಿ,ದಿವಾಕರ ಚೆಂಡ್ತಿಮಾರ್,ಶ್ರೀನಿವಾಸ ಶೆಟ್ಟಿ ದೈವಗುಡ್ಡೆ,ಹೊನ್ನಯ್ಯ ಸುವರ್ಣ,ಜಗದೀಶ್ ಬಡ್ಡಕಟ್ಟೆ,ನಾಸೀರ್ ಕೆಳಗಿನ ಪೇಟೆ,ಅಮ್ಮು ಅರ್ಬಿಗುಡ್ಡೆ,ಲೋಕೇಶ್ ಕೃಷ್ಣಾಪುರ,ರಿಯಾಝ್ ಕೆಳಗಿನಪೇಟೆ,ರಾಮಣ್ಣ ಪೂಜಾರಿ ಅಮಾಡಿ,ಗಣೇಶ್ ಪೂಜಾರಿ ನೇರಂಬೋಳ್,ಶಬೀರ್,ಕುಕ್ಕಿಪಾಡಿ,ಫಾರೂಕ್ ನಾವೂರ, ಭಾರತಿ ರಾಜೇಂದ್ರ ಪೂಜಾರಿ ಮೊದಲಾದವರಿದ್ದರು.
ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಹಾಬಲ ಬಂಗೇರ ಸ್ವಾಗತಿಸಿದರು.ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಾಸು ಪೂಜಾರಿ ಲೊರೆಟ್ಟೋ ಧನ್ಯವಾದವಿತ್ತರು.