ಫೋಟೋಗ್ರಾಫರ್ಸ್ ಅಸೋಸಿಯೇಷನ್ ನಿಂದ ಆಸ್ಪತ್ರೆ ಆವರಣದಲ್ಲಿ ಸ್ವಚ್ಚತಾ ಕಾರ್ಯ
ಬಂಟ್ವಾಳ: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ದ. ಕ ಮತ್ತು ಉಡುಪಿ ಜಿಲ್ಲೆಯ ಬಂಟ್ವಾಳ ವಲಯದ ಆಶ್ರಯದಲ್ಲಿ ಬಂಟ್ವಾಳ ಸರಕಾರಿ ಆಸ್ಪತ್ರೆ ಆವರಣದಲ್ಲಿ ಗಾಂಧಿ ಜಯಂತಿಯ ಪ್ರಯುಕ್ತ ಸ್ವಚ್ಛತಾ ಕಾರ್ಯವನ್ನು ನಡೆಸಲಾಯಿತು.ಮೂಳೆ ತಜ್ಞ ವೈದ್ಯರಾದ ಡಾ. ಚೇತನ್ ಕುಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ವಲಯಾಧ್ಯಕ್ಷ ಕಿಶೋರ್ ಎಸ್ ಕುಮಾರ್,ಗೌರವಾಧ್ಯಕ್ಷ ಹರೀಶ್ ಕುಂದರ್,ಜಿಲ್ಲಾ ಪ್ರ.ಕಾರ್ಯದರ್ಶಿ ದಯಾನಂದ್ ಬಂಟ್ವಾಳ,ಜಿಲ್ಲಾ ಕಟ್ಟಡ ಸಮಿತಿ ಅಧ್ಯಕ್ಷ ಆನಂದ್ ಎನ್. ಬಂಟ್ವಾಳ್,ಕಾರ್ಯದರ್ಶಿ ಪ್ರಶಾಂತ್ ಕಲ್ಲಡ್ಕ,ಖಜಾಂಚಿ ವರುಣ್ ಕಲ್ಲಡ್ಕ,ಪುರಸಭೆಯ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ,ರಝಾಕ್,ಹರೀಶ್ ರಾವ್,ಆನಂದ್ ಪೆರುವಾಯಿ,ತಿರುಮಲೇಶ,ರಾಜೇಂದ್ರ,ರವಿಪ್ರಕಾಶ್,ಮೋಹನ್ ದಾಸ್,ರಿಚರ್ಡ್ ವಾಮದಪದವು, ಯೋಗೀಶ್ ನರಿಕೊಂಬು,ಸರಕಾರಿ ಆಸ್ಪತ್ರೆಯ ಮತ್ತು ಪುರಸಭೆಯ ಸಿಬ್ಬಂದಿಗಳು ಪಾಲ್ಗೊಂಡಿದ್ದರು ಹಾಗೂ ಪೌರಕಾರ್ಮಿಕರು ಸಹಕರಿಸಿದರು.