ದಡ್ಡಲಕಾಡು ಶಾಲೆಯಲ್ಲಿ ವಿಶ್ವಶಾಂತಿ ದಿನಾಚರಣೆ
ಬಂಟ್ವಾಳ: ದಡ್ಡಲಕಾಡು ಸರಕಾರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ವಿಶ್ವಶಾಂತಿ ದಿನವನ್ನು ಸ್ಕೌಟ್ಸ್ ಮತ್ತು ಗೈಡ್ಸ್ ನ ನೇತೃತ್ವದಲ್ಲಿ ನಡೆಸಲಾಯಿತು.

ಸಂಸ್ಥೆಯ ಬುಲ್ ಬುಲ್ ಶಿಕ್ಷಕಿಯಾದ ಹಿಲ್ಡಾ ಫೆರ್ನಾಂಡಿಸ್ ಬುಲ್ ಬುಲ್ ವಿದ್ಯಾರ್ಥಿಗಳಿಗೆ ಅಂತರಾಷ್ಟ್ರೀಯ ಶಾಂತಿ ದಿವಸದ ಮಹತ್ವವನ್ನು ತಿಳಿಸಿ,ಬುಲ್ ಬುಲ್ ವಿದ್ಯಾರ್ಥಿಗಳ ಜಾಥದೊಂದಿಗೆ ಅಂತರಾಷ್ಟ್ರೀಯ ಶಾಂತಿ ದಿವಸವನ್ನು ಆಚರಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯೋಪಾಧ್ಯಾಯ ರಮಾನಂದ ,ಪ್ರೌಢಶಾಲಾ ವಿಭಾಗದ ಎಸ್ ಡಿ ಎಮ್ ಸಿ ಅಧ್ಯಕ್ಷ ಪುರುಷೋತ್ತಮ್ ಅಂಚನ್,ಪ್ರಾಥಮಿಕ ವಿಭಾಗದ ಮುಖ್ಯಸ್ಥೆ ವಿನ್ನಿ ಸಿಂತಿಯಾ ಹಾಗೂ ಬುಲ್ ಬುಲ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು .