ಪೊಳಲಿ ರಾಮಕೃಷ್ಣ ತಪೋವನದಲ್ಲಿ “ಅಖಂಡ ಭಜನಾ ಸಪ್ತಾಹಕ್ಕೆ ಚಾಲನೆ”
ಕೈಕಂಬ: ರಾಮಕೃಷ್ಣ ತಪೋವನ ಪೊಳಲಿಯಲ್ಲಿ ಸೆ.23 ಬೆಳಗ್ಗೆ 7:30ಕ್ಕೆ ಸೆ.23 ರಿಂದ 30 ರ ವರೆಗೆ ನಡೆಯಲಿರುವ “ಅಖಂಡ ಭಜನಾ ಸಪ್ತಾಹ”ಕ್ಕೆ ಸ್ವಾಮಿ ವಿವೇಕ ಚೈತನ್ಯಾನಂದ ಸ್ವಾಮೀಜಿ ಉಪಸ್ಥಿತಿಯಲ್ಲಿ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಅಖಂಡ ಭಜನಾ ಕಾರ್ಯಕ್ರಮದ ಮೊದಲನೇ ದಿನದಂದು ದೀಪ ಬೆಳಗಿಸಿದ ನಂತರ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನಕ್ಕೆ ತೆರಳಿ ಅಲ್ಲಿ ಪೂಜೆ ನೆರವೇರಿಸಿದ ಬಳಿಕ ಶ್ರೀ ರಾಜರಾಜೇಶ್ವರೀ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ಪ್ರಾರಂಭಗೊಂಡಿತು.
ಈ ಸಂದರ್ಭದಲ್ಲಿ ಪೊಳಲಿ ದೇವಸ್ಥಾನದ ಅರ್ಚಕರಾದ ಮಾಧವ್ ಭಟ್,ನಾರಾಯಣ್ ಭಟ್,ರಾಮ್ ಭಟ್,ಪರಮೇಶ್ವರ್ ಭಟ್ ಹಾಗೂ ಸ್ಥಳೀಯರಾದ ವೆಂಕಟೇಶ್ ನಾವಡ ಪೊಳಲಿ,ಬಾಬು ರಾವ್,ಯಶೋಧರ್ ಕಲ್ಕುಡ,ಸೋಮ್‌ಶೇಖರ್ ಪೊಳಲಿ,ಜಗದೀಶ್ ನೆತ್ತೆರ್‌ಕೆರೆ,ಆಶ್ರಮ ವಾಸಿಗಳು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.