ಬಂಟ್ವಾಳ ನಗರ ಠಾಣೆಯ ಇನ್ಸ್ ಪೆಕ್ಟರ್ ಆಗಿ ಆನಂತ ಪದ್ಮನಾಭ ಅಧಿಕಾರ ಸ್ವೀಕಾರ
ಬಂಟ್ವಾಳ: ಬಂಟ್ವಾಳ ನಗರ ಠಾಣೆಯ ಇನ್ಸ್ ಪೆಕ್ಟರ್ ಆಗಿ ಆನಂತಪದ್ಮನಾಭ ಅವರು ಶುಕ್ರವಾರ ಅಧಿಕಾರ ಸ್ವೀಕರಿಸಿದ್ದಾರೆ.
ಪ್ರಭಾರ ಇನ್ಸ್ ಪೆಕ್ಟರ್ ನಾಗರಾಜ್ ಎಚ್.ಇ.ಅವರು ಪುಷ್ಪಗುಚ್ಚ ನೀಡಿ ಸ್ವಾಗತಿಸಿದರು.
ವಿವೇಕಾನಂದ ಅವರು ವರ್ಗಾವಣೆ ಆದ ಬಳಿಕ ಖಾಲಿಯಾಗಿದ್ದ ನಗರ ಪೋಲಿಸ್ ಠಾಣೆಗೆ ಅನಂತ ಪದ್ಮನಾಭ ಅವರನ್ನು ಇನ್ಸ್ ಪೆಕ್ಟರ್ ಆಗಿ ನಿಯುಕ್ತಿಗೊಳಿಸಲಾಗಿತ್ತು.
ಕದ್ರಿ ಪೋಲಿಸ್ ಠಾಣೆಯಿಂದ ಲೋಕಾಯುಕ್ತಕ್ಕೆ ವರ್ಗಾವಣೆಗೊಂಡಿದ್ದ ಆನಂತಪದ್ಮನಾಭ ಅವರನ್ನು ಇದೀಗ ಬಂಟ್ವಾಳ ನಗರ ಪೋಲೀಸ್ ಠಾಣೆಯ ಇನ್ಸ್ ಪೆಕ್ಟರ್ ಆಗಿ ನಿಯುಕ್ತಿಗೊಳಿಸಿ ಸರಕಾರ ಅದೇಶ ಮಾಡಿತ್ತು.