Published On: Wed, Sep 20th, 2023

ಎಸ್‌ಸಿ/ಎಸ್‌ಟಿ ಕಾಲೊನಿಯಲ್ಲಿ ೧೨ ಲ. ವೆಚ್ಚದ ʼಸಭಾಭವನ’ ನಿರ್ಮಾಣಕ್ಕೆ ಡಾ. ಭರತ್ ಶೆಟ್ಟಿ ಗುದ್ದಲಿಪೂಜೆ

ಕೈಕಂಬ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್,ಮಂಗಳೂರು ತಾಲೂಕು ಪಂಚಾಯತ್ ಮತ್ತು ಗುರುಪುರ ಗ್ರಾಮ ಪಂಚಾಯತ್ ೨೦೧೭-೧೮ನೇ ಸಾಲಿನ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆ ಅನುದಾನದಡಿ ಗುರುಪುರ ಪಂಚಾಯತ್ ವ್ಯಾಪ್ತಿಯ ಮೂಳೂರು ಗ್ರಾಮದ ಮಠದ ಬಳಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜಂಟಿ ಕಾಲೊನಿಯಲ್ಲಿ ನೂತನ `ಸಭಾಭವನ’ ನಿರ್ಮಾಣಕ್ಕೆ ಮಂಗಳೂರು ನಗರ ಉತ್ತರ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ಅವರು ಸೆ. ೨ರಂದು ಗುದ್ದಲಿಪೂಜೆ ನೆರವೇರಿಸಿದರು.

ಮಾಧ್ಯಮದೊಂದಿಗೆ ಶಾಸಕರು ಮಾತನಾಡಿ, ಇದು ೧೨ ಲಕ್ಷ ರೂ ಅನುದಾನದ ಕಾಮಗಾರಿಯಾಗಿದ್ದು, ಸಭಾಭವನ ರಚನೆಗೆ ಅಗತ್ಯವಿರುವ ಉಳಿಕೆ ಅನುದಾನ ಒದಗಿಸಲು ಪ್ರಯತ್ನಿಸಲಾಗುವುದು ಎಂದು ಕಾಲೊನಿ ಮಂದಿಗೆ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಪಂಚಾಯತ್ ಅಧ್ಯಕ್ಷೆ ಸಫರಾ ಎಂ, ಉಪಾಧ್ಯಕ್ಷ ದಾವೂದ್ ಬಂಗ್ಲೆಗುಡ್ಡೆ, ಸದಸ್ಯರಾದ ಯಶವಂತ ಶೆಟ್ಟಿ, ಸುನಿಲ್ ಜಲ್ಲಿಗುಡ್ಡೆ, ಸದಾಶಿವ ಶೆಟ್ಟಿ ಕೆ, ರಾಜೇಶ್ ಸುವರ್ಣ, ಶೋಭಾ ಎ, ಸಚಿನ್ ಅಡಪ, ಹರೀಶ್ ಬಳ್ಳಿ, ಬಬಿತಾ, ನಳಿನಿ ಶೆಟ್ಟಿ, ಅಶ್ರಫ್ ನಡುಗುಡ್ಡೆ ಅಡ್ಡೂರು, ಅಝ್ಮಿನಾ ಎ, ಬುಶ್ರಾ ಎ, ರೆಹನಾ ಎಚ್, ಶಾಹಿಕ್, ಬಿಜೆಪಿ ಮುಖಂಡ ಶ್ರೀಕರ ವಿ. ಶೆಟ್ಟಿ, ಪಿಡಿಒ ಪಂಕಜಾ ಶೆಟ್ಟಿ, ಕಾರ್ಯದರ್ಶಿ ಅಶೋಕ್, ಸಿಬ್ಬಂದಿ ವರ್ಗ, ಎಸ್‌ಸಿ/ಎಸ್‌ಟಿ ಕಾಲೊನಿ ನಿವಾಸಿಗರು ಉಪಸ್ಥಿತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter