Published On: Mon, Sep 18th, 2023

ಅಡ್ಡೂರಿನ ೩೭ನೇ ವರ್ಷದ ಗಣೇಶೋತ್ಸವಕ್ಕೆ “ಬೆನಕ ಮಂಟಪ”ಕ್ಕೆ ಆಗಮಿಸಿದ ಗಣೇಶನ ವಿಗ್ರಹ

ಕೈಕಂಬ: ಮಂಗಳೂರಿನ ಪಾಂಡೇಶ್ವರದಲ್ಲಿ ಕಮಲ ಆರ್ಟ್ಸ್ ಇಲ್ಲಿಯ ಶಿಲ್ಪಿ ನವೀನ್ ಆಚಾರ್ಯ ಅವರ ಕಲಾಕೃತಿಯಲ್ಲಿ ರಚಿಸಿದ ಶ್ರೀ ಗಣೇಶನ ವಿಗ್ರಹವನ್ನು ಅಡ್ಡೂರಿನ ಸಾರ್ವಜನಿಕ ಶ್ರೀ ಗಣೇಶೋತ್ಸದ “ಬೆನಕ ಮಂಟಪ”ದಲ್ಲಿ ಪ್ರತಿಷ್ಠಾಪಿಸಲು ಗಣೇಶೋತ್ಸವ ಸಮಿತಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಅಶೋಕ್ ಗರಡಿ ಅಡ್ಡೂರು,ಚಿದಾನಂದ್ ಗುರಿಕಾರ ನಂದ್ಯ,ಸುಕುಮಾರ ಪಲ್ಲನೆಲ,ಸುಶಾನ್ ಅಡ್ಡೂರು,ಸುಭಾಶ್‌ ಚಂದ್ರ ಪೊನ್ನೆಲ,ಜಯಲಕ್ಷ್ಮಿ ಸುಭಾಶ್‌ ಚಂದ್ರ,ಶಂಕರ ಅಡ್ಡೂರು,ಉಮೇಶ್‌ ಡ್ರೈವರ್ ನೂಯಿ,ಆನಂದ್‌ ಕಾಂಜಿಲಕೋಡಿ ಹಾಗೂ ಸಮಿತಿಯ ಸದಸ್ಯರು ಇದ್ದರು.

೩೭ನೇ ವರ್ಷದ ಗಣೇಶೋತ್ಸವ ಪ್ರಯುಕ್ತ ಸೆ.೧೯ ರಂದು ಬೆಳಿಗ್ಗೆ ೯:೩೦ಕ್ಕೆ ಅಡ್ಡೂರಿನ “ಬೆನಕ ಮಂಟಪ”ದಲ್ಲಿ ಶ್ರೀ ಮಾಧವ ಭಟ್ ಪವಿತ್ರ ಪಾಣಿ ಇವರ ಉಪಸ್ಥಿತಿಯಲ್ಲಿ ಮಹಾಗಣಪತಿಯ ವಿಗ್ರಹ ಪ್ರತಿಷ್ಠೆ ನಡೆಯಲಿರುವುದು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter