ಅಡ್ಡೂರು ಚೌತಿ :೩೭ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೊತ್ಸವ
ಕೈಕಂಬ: ಅಡ್ಡೂರು ೩೭ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೊತ್ಸವವು ೧೯ ಮಂಗಳವಾರದಂದು ಅಡ್ಡೂರಿನ “ಬೆನಕ ಮಂಟಪ”ದಲ್ಲಿ ನಡೆಯುವುದು.

ಬೆಳಗ್ಗೆ ೯:೩೦ಕ್ಕೆ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಪ್ರಧಾನ ಅರ್ಚಕರಾದ ಮಾಧವ ಭಟ್ ಪವಿತ್ರ ಪಾಣಿ ಅವರ ಉಪಸ್ಥಿತಿಯಲ್ಲಿ “ವಿಗ್ರಹ ಪ್ರತಿಷ್ಠೆ” ನೆರವೇರುವುದು.
೧೦ಗಂಟೆಯಿಂದ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯುವುದು.
ಗಂಟೆ ೧೨:೦೦ಕ್ಕೆ “ಗಣಹೋಮ ಪೂರ್ಣಾಹುತಿ”,೧೨:೩೦ಕ್ಕೆ ಮಹಾಪೂಜೆ.
ಮಧ್ಯಾಹ್ನ ೧.೩೦ರಿಂದ ೪:೩೦ರ ವರೆಗೆ ಶ್ರೀ ಬೆಂಕಿನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿ ಬಾಳ,ಕಳವಾರು,ವಿಜಿತ್ ಕುಮಾರ್ ಶೆಟ್ಟಿ ಆಕಾಶಭವನ ವಿರಚಿತ “ಶ್ರೀ ದೇವಿ ಅಗ್ನಿ ಕಲ್ಲುರ್ಟಿ” ಯಕ್ಷಗಾನ ಬಯಲಾಟ.
ಸಂಜೆ ಗಂಟೆ ೪:೩೦ರಿಂದ ಸಮಾರೋಪ ಸಮಾರಂಭ,ಶ್ರೀ ಕ್ಷೇತ್ರ ಉಪ್ಪುಗೋಡು ವಜ್ರದೇಹಿ ಮಠ ಗುರುಪುರ ಇಲ್ಲಿಯ ಪೂಜ್ಯ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಲಿರುವರು.
ವೇದಿಕೆಯಲ್ಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನ ಪೊಳಲಿಯ ಅರ್ಚಕರಾದ ರಾಮ್ ಭಟ್ ಪೊಳಲಿ ಇವರ ದಿವ್ಯ ಉಪಸ್ಥಿತಿಯಲ್ಲಿ ಕೆಂಜಾರು ಕೇಂಜ ಮುನಿ ಮಠದ ಸಮ್ಮೋಹಿನಿ ಚಿಕಿತ್ಸಕ ಮತ್ತು ಆಧ್ಯಾತ್ಮಿಕ ಚಿಂತಕ ಅರವಿಂದ ಬೆಳ್ಚಡ ಇವರು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.ಶ್ರೀ ಮುಖ್ಯಪ್ರಾಣ ದೇವಸ್ಥಾನ ಪೊನ್ನೆಂಗಿಲ ಅಡ್ಡೂರಿನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಧನಂಜಯ ಭಟ್ ಗಂದಾಡಿ ಅಧ್ಯಕ್ಷತೆಯಲ್ಲಿ ಮೂಡಬಿದ್ರೆ ವಕೀಲ ಶರತ್ ಡಿ.ಶೆಟ್ಟಿ,ಡಾ.ಜಿ.ಶ್ವೇತ ಪ್ರಭು ಮಂಜುಶ್ರೀ ಕ್ಲಿನಿಕ್ ಗುರುಪುರ,ಸೋಮಶೇಖರ್ ಪೊಳಲಿ,ರೋಶನ್ ಅಮೀನ್ ಪುಂಚಮೆ,ಅಲ್‌ಬಿರ್ ಸ್ಕೂಲ್ ಅಧ್ಯಕ್ಷ ಎಮ್.ಎಸ್.ಶೇಖಬ್ಬ ಉಪಸ್ಥಿತರಿರುವರು.
ಸಂಜೆ ಗಂಟೆ೬:೦೦ಕ್ಕೆ ಶ್ರೀ ಮಹಾಗಣಪತಿ ದೇವರ ಶೋಭಾಯಾತ್ರೆಯು ಕೊಂಬು,ಕಹಳೆ,ಮಂಗಳವಾದ್ಯ,ಶಂಖ,ಘಂಟೆ ನಿನಾದಗಳೊಂದಿಗೆ ವೈಭವದ ಮೆರವಣಿಗೆಯಲ್ಲಿ ಅಡ್ಡೂರು,ನೂಯಿ ಮಾರ್ಗವಾಗಿ,ಬಡಕಬೈಲು ತನಕ ಹೋಗಿ ಅಲ್ಲಿ ಭಕ್ತಾದಿಗಳ ಸೇವೆಗಳನ್ನು ಸ್ವೀಕರಿಸಿ,ಅಲ್ಲಿಂದ ಹಿಂತಿರುಗಿ ಫಲ್ಗುಣಿ ನದಿಯಲ್ಲಿ ಗಣೇಶನ ವಿಗ್ರಹವನ್ನು ವಿಸರ್ಜಿಸಲಾಗುವುದು.