ಕೊಯಿಲ : ಮೊಸರು ಕುಡಿಕೆ ಉತ್ಸವ ಹಾಗೂ ಸಾಧಕರಿಗೆ ಸನ್ಮಾನ
ಬಂಟ್ವಾಳ: ತಾಲೂಕಿನ ಕೊಯಿಲ ಶ್ರೀ ಗುರುಗಣೇಶ್ ಭಜನಾ ಮಂಡಳಿ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ೧೯ ನೇ ವರ್ಷದ ಮೊಸರು ಕುಡಿಕೆ ಉತ್ಸವವು ಕೊಯಿಲ ದಿ.ದೇವಪ್ಪ ಶೆಟ್ಟಿ ಕ್ರೀಡಾಂಗಣದಲ್ಲಿ ನಡೆಯಿತು.
ಬೆಳಗ್ಗೆ ಮಾವಂತೂರು ಶ್ರೀ ಮಹಾಗಣಪತಿ ದೇವಸ್ಥಾನದ ಪ್ರ.ಅರ್ಚಕ ಸುಂದರ ಹೊಳ್ಳ ಅವರು ಧ್ವಜಾರೋಹಣಗೈದರು.ಆಡಳಿತ ಮೊಕ್ತೇಸರ ಪದ್ಮರಾಜ ಬಲ್ಲಾಳ್ ಕಾರ್ಯಕ್ರಮ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಸಮಿತಿ ಗೌರವ ಸಲಹೆಗಾರ ಕೊರಗಪ್ಪ ಪೂಜಾರಿ,ರಾಯಿ ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ಅಧ್ಯಕ್ಷ ಶೇಖರ ಅಂಚನ್ ಪಿಲ್ಕಾಜೆಗುತ್ತು,ಲೊರೆಟ್ಟೊಹಿಲ್ಸ್ ರೋಟರಿ ಕ್ಲಬ್ ಅಧ್ಯಕ್ಷ ರಾಮಚಂದ್ರ ಶೆಟ್ಟಿಗಾರ್,ಗುತ್ತಿಗೆದಾರ ರಾಜೇಶ್ ಗೋವಿಂದಬೆಟ್ಟು,ಬಂಟ್ವಾಳ ಲಯನ್ಸ್ ಕಬ್ ಅಧ್ಯಕ್ಷ ಪ್ರಶಾಂತ್ ಕೋಟ್ಯಾನ್,ವೈಷ್ಣವಿ ಕಲಾತಂಡ ಸಂಚಾಲಕ ಸುರೇಶ್ ಸುವರ್ಣ ಕುದ್ಕೋಳಿ,ಬಂಟ್ವಾಳ ಜೆಸಿಐ ಅಧ್ಯಕ್ಷ ರಾಜೇಂದ್ರ ಮತ್ತಿತರರು ಉಪಸ್ಥಿತರಿದ್ದರು.

ಮಕ್ಕಳಿಗೆ ಶ್ರೀ ಕೃಷ್ಣ ವೇಷ ಸ್ಪರ್ಧೆ,ಸಾರ್ವಜನಿಕರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು.ಸಂಜೆ ಸಮಾರೋಪದಲ್ಲಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು,ಎಬಿವಿಪಿ ಪ್ರಮುಖ್ ಕೇಶವ ಬಂಗೇರ,ಹಿಂದೂ ಸಂಘಟನೆಗಳ ಪ್ರಮುಖರಾದ ಮಹೇಶ್ ಶೆಟ್ಟಿ ತಿಮರೋಡಿ,ಅರುಣ್ ಕುಮಾರ್ ಪುತ್ತಿಲ,ನಿವೃತ್ತ ಸೇನಾಧಿಕಾರಿ ಕ್ಯಾ| ಬೃಜೆಶ್ ಚೌಟ,ಹಿಂದೂ ಧರ್ಮೋತ್ಥಾನ ವೇದಿಕೆ ಅಧ್ಯಕ್ಷ ದುರ್ಗಾದಾಸ್ ಶೆಟ್ಟಿ ಮಾವಂತೂರು, ಹೊಕ್ಕಾಡಿಗೋಳಿ ಕಂಬಳ ಸಮಿತಿ ಅಧ್ಯಕ್ಷ ರಶ್ಮಿತ್ ಶೆಟ್ಟಿ ಕೈತ್ರೋಡಿ,ರತೀಶ್ ಶೆಟ್ಟಿ ಕೊನೆರಬೆಟ್ಟು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಾದ ದುರ್ಗಾದಾಸ್ ಶೆಟ್ಟಿ, ವಿಶ್ವನಾಥ ಕೊಲ, ದಾಸಪ್ಪ ಪರವ, ತೀರ್ಥೇಶ್ ಶೆಟ್ಟಿ, ಹರ್ಷಿತ್ ಕೊಲ ಹಾಗೂ ಬೊಟ್ಟಿಮಾರು ಮತ್ತು ತಾಟೆ ಕಂಬಳ ಕೋಣಗಳನ್ನು ಸನ್ಮಾನಿಸಲಾಯಿತು.
ಅಧ್ಯಕ್ಷ ಸಂತೋಷ್ ಅಂಚನ್ ಸ್ವಾಗತಿಸಿದರು.ದಿನೇಶ್ ಸುವರ್ಣ ಕುದ್ಕೋಳಿ ಕಾರ್ಯಕ್ರಮ ನಿರೂಪಿಸಿದರು.ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು,ಖ್ಯಾತ ತಂಡಗಳಿಂದ ಕುಸಲ್ದ ಗೌಜಿ ಪಂಥ ಎಂಬ ಹಾಸ್ಯ ಪ್ರಹಸನ ಸ್ಪರ್ಧೆ ನಡೆಯಿತು.