ತಲಪಾಡಿ ಟೋಲ್ ಬಳಿ ಟ್ರಾಫಿಕ್ ಸಮಸ್ಯೆ ಸರಿಮಾಡುವಿರಾ?
ಮಂಗಳೂರು : ತಲಪಾಡಿ ಟೋಲ್ ಗೇಟ್ ಬಳಿ ವಾಹನಗಳ ಸಮಸ್ಯೆಯಿಂದಾಗಿ ಸಾರ್ವಜನಿಕರಿಗೆ ಆಟೋ ಚಾಲಕರಿಗೆ ಮತ್ತು ಸಿಟಿ ಬಸ್ಸಿನವರಿಗೆ ತುಂಬಾ ತೊಂದರೆ ಆಗುತ್ತಿದ್ದು ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕಾಗಿದೆ.
ದೇವಿಪುರ ರಸ್ತೆಯಲ್ಲಿ ಬರುವ ವಾಹನಗಳಿಗೆ ರಾಷ್ಟ್ರೀಯ ಹೆದ್ದಾರಿ ತಲಪುವ ಸಂಧರ್ಭದಲ್ಲಿ ಹೆದ್ದಾರಿ ತುಂಬಾ ಅವ್ಯವಸ್ಥೆ ರೀತಿಯಲ್ಲಿ ಬೃಹದಾಕಾರದ ಲಾರಿಗಳು , ಕಂಟೈನರುಗಳು ನಿಲ್ಲುತ್ತಿದ್ದು ಸಾರ್ವಜನಿಕರಿಗೆ ನಡೆಯಲು ಇರುವ ಪುಟ್ ಪಾತ್ ಕೂಡ ಮಾಯವಾಗಿದೆ . ಈ ಹಿಂದೆ ಅನೇಕ ಅಪಘಾತಗಳು ನಡೆದು ಅನೇಕ ಜೀವಹಾನಿ ಆಗಿದೆ.
ಕೇರಳದ ಲೋಕಲ್ ಬಸ್ಸುಗಳು ಕೂಡ ಕರ್ನಾಟಕದ ಗಡಿ ಭಾಗದಲ್ಲಿ ನಡು ರಸ್ತೆಯಲ್ಲೇ ನಿಲ್ಲಿಸುತ್ತಿದ್ದು ಈ ಭಾಗದ ಶಾಲಾ ಮಕ್ಕಳು, ಮಹಿಳೆಯರು, ದಿನಂಪ್ರತಿ ಕೆಲಸಕ್ಕೆ ಹೋಗುವ ಸಾರ್ವಜನಿಕರಿಗೆ ಮತ್ತು ದ್ವೀಚಕ್ರ ವಾಹನ ಚಾಲಕರು ಆಟೋ ಚಾಲಕರು ದಿನ ನಿತ್ಯ ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ.
ಹಾಗೂ ಕೇರಳದಿಂದ ಬರುವ ಸರಕಾರಿ ಬಸ್ಸುಗಳು ಕೂಡ ನಿಯಮ ಉಲ್ಲಂಘನೆ ಮಾಡಿ ಒಮ್ಮೆಲೇ ಬ್ರೇಕ್ ಹಾಕಿ ನಡು ರಸ್ತೆಯಲ್ಲೇ ನಿಲ್ಲಿಸುವುದು, ಇವರಿಗೆ ಕೇಳುವವರೇ ಇಲ್ಲದಾಗಿದೆ. ಇದರಿಂದಾಗಿ ಇಲ್ಲಿನ ಸಿಟಿ ಬಸ್ಸಿನವರಿಗೂ ತೊಂದರೆ ಆಗುತ್ತಿದೆ. ದಯವಿಟ್ಟು ಬಸ್ಸಿನವರಿಗೆ ನಿಲ್ಲಲು ಸರಿಯಾದ ವ್ಯವಸ್ಥೆ ಕಲ್ಪಿಸಿ, ಈ ರಾಷ್ಟ್ರೀಯ ಹೆದ್ದಾರಿಯ ಮಧ್ಯಭಾಗದಲ್ಲಿ ದಿನದ 24 ಗಂಟೆಯ ಕಾಲ ಪೊಲೀಸ್ ಕೊಡೆಯ ಮತ್ತು 2 ಪೊಲೀಸ್ ಅಧಿಕಾರಿಗಳ ಅವಶ್ಯಕತೆ ಇದ್ದು .ಇಲ್ಲಿ ನಡೆಯುವ ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡಿ ಸಾರ್ವಜನಿಕರಿಗೆ ಸಹಾಯ ಮಾಡಲು
ಸಾಮಾಜಿಕ ಹೋರಾಟಗಾರ ಯಶು ಪಕ್ಕಳ ತಲಪಾಡಿ ಆಗ್ರಹಿಸಿದ್ದಾರೆ