Published On: Wed, Sep 13th, 2023

ತಲಪಾಡಿ ಅಪರಿಚಿತ ಯುವಕನ ವಿಚಿತ್ರ ರೀತಿ ವರ್ತನೆ

ಮಂಗಳೂರು : ಉಳ್ಳಾಲ ವ್ಯಾಪ್ತಿಯ ತಲಪಾಡಿ ಟೋಲ್ ಗೇಟ್ ನ ಹತ್ತಿರದ ರಾಷ್ಟ್ರೀಯ ಹೆದ್ದಾರಿ ಕ್ಯಾಂಟೀನ್ ಬಳಿಯಲ್ಲಿ ಸೆ.12ರಂದು ತಡರಾತ್ರಿ ಸುಮಾರು ೧೨ ಗಂಟೆಯ ಹೊತ್ತಿಗೆ ಅಪರಿಚಿತ ಯುವಕನೊಬ್ಬ ವಿಚಿತ್ರ ರೀತಿ ವರ್ತಿಸುತ್ತಿದ್ದು ಯಾವುದೋ ಅಮಲು ಪದಾರ್ಥವನ್ನು ಸೇವಿಸಿದಂತೆ ಮೇಲ್ನೋಟಕ್ಕೆ ಕಂಡು ಬಂದಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಂಗಡಿಯಲ್ಲಿ ಗುಟ್ಕಾ- ಸಿಗರೇಟುಗಳನ್ನು ಮಾರುತ್ತಿದ್ದು ದೂರದ ದೇರಳಕಟ್ಟೆ,ಕೇರಳದ ಭಾಗಗಳಿಂದ ಯುವಕರು,ವಿದ್ಯಾರ್ಥಿಗಳು ಬರುತ್ತಿದ್ದು ಈ ಅಂಗಡಿಯಲ್ಲಿ ಯುವಕರು ತಡರಾತ್ರಿಯವರೇಗೆ ಅಂಗಡಿಯ ಭಾಗದಲ್ಲಿ ಗುಂಪುಕಟ್ಟಿಕೊಂಡು ನಿಂತಿರುತ್ತಾರೆ. ಮಾಧಕ ವಸ್ತುಗಳನ್ನು ಮಾರಲು ಅವಕಾಶ ಇದೆಯೇ ಎಂಬುದು ಕೂಡ ಯಕ್ಷ ಪ್ರಶ್ನೆಯಾಗಿ ಉಳಿದಿದೆ. ಇದರಿಂದಾಗಿ ಇಲ್ಲಿನ ಸುತ್ತಮುತ್ತಲಿನ ನಾಗರಿಕರಲ್ಲಿ ಆತಂಕವನ್ನು ಉಂಟುಮಾಡಿದೆ.

ತಲಪಾಡಿ ಸುತ್ತಮುತ್ತಲಿನ ಭಾಗಗಳಲ್ಲಿ ಈ ಹಿಂದೆ ಅನೇಕ ಬಾರಿ ಗಾಂಜಾ ವ್ಯಸನಿಗಳನ್ನು ಹಾಗೂ ಮಾರುವವರನ್ನು ಪೊಲೀಸ್ ಅಧಿಕಾರಿಗಳು ಬಂಧಿಸಿದ್ದನ್ನು ಕೇಳಿದ್ದೇವೆ.ಆದುದರಿಂದ ಉನ್ನತ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಕೈಗೊಂಡು ದಿನದ ೨೪ ಗಂಟೆಯೂ ಈ ಭಾಗದಲ್ಲಿ ಪೊಲೀಸ್ ಔಟ್ ಪೋಸ್ಟ್ ಒಂದನ್ನು ನಿರ್ಮಿಸಬೇಕೆಂಬುದು ಸಾರ್ವಜನಿಕರ ಬಹುದಿನಗಳ ಬೇಡಿಕೆಯನ್ನು ಈಡೇರಿಸಬೇಕಾಗಿ ಜಲ್ಲಾಡಳಿತವನ್ನು ಸಾಮಾಜಿಕ ಹೋರಾಟಗಾರ ಯಶು ಪಕ್ಕಳ ತಲಪಾಡಿ ಆಗ್ರಹಿಸಿದ್ದಾರೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter