“ಮಿಸ್ ಕರ್ನಾಟಕ” ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಪ್ರೇಕ್ಷಾ ಎನ್.ವಿ
ಮಂಗಳೂರು: ತೌಡುಗೋಳಿಯ ವಿಜಯ್ ಕುಮಾರ್ ಮತ್ತು ನಯನಾ ದಂಪತಿಯ ಪುತ್ರಿ ಪ್ರೇಕ್ಷಾ ಬೆಂಗಳೂರಿನ ಪ್ರತಿಷ್ಠಿತ ಫಾಕ್ಸ್ ಫೈಯರ್ ಡ್ಯಾನ್ಸ್ ಸ್ಟುಡಿಯೋ ಇತ್ತೀಚೆಗೆ ಆಯೋಜಿಸಿದ “ಮಿಸ್ ಕರ್ನಾಟಕ”-೨೦೨೩ ರ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ವಿಜೇತರಾಗಿದ್ದಾರೆ.
ಇವರು ಮಂಗಳೂರಿನ ಎ.ಜೆ.ಮೆಡಿಕಲ್ ಕಾಲೇಜಿನ ನ್ಯೂರೋ ಸೈನ್ಸ್ ಟೆಕ್ನಾಲಜಿಯ ವಿದ್ಯಾರ್ಥಿನಿಯಾಗಿದ್ದು
ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚುತ್ತಿರುವ ಪ್ರೇಕ್ಷಾ ತೌಡುಗೋಳಿಯ ಗ್ರಾಮೀಣ ಪ್ರತಿಭೆ ಎಂದು ಹೇಳಲು ಹೆಮ್ಮೆಯಾಗುತ್ತದೆ.