ಮಂಗಳೂರು: ನಾಯಕತ್ವ ಗುಣ,ಸಮಯ ಪಾಲನೆ ಮತ್ತು ಶಿಸ್ತು ವಿದ್ಯಾರ್ಥಿಗಳ ಜೀವನದಲ್ಲಿ ಅತಿ ಮುಖ್ಯ ಎಂದು ಶ್ರೀ ಕಟೀಲು ದುರ್ಗಾಪರಮೇಶ್ವರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಕೃಷ್ಣ ಕಾಂಚನ್‌ ತಿಳಿಸಿದರು.
ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ವಿದ್ಯಾರ್ಥಿ ಸಂಘದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು ಜೀವನದಲ್ಲಿ‌ ಬರುವ ಸೋಲುಗಳಿಗೆ‌ ಕುಗ್ಗದೆ ನಿರಂತರ ಪ್ರಯತ್ನದ ಮೂಲಕ ಸಫಲತೆಯನ್ನು ಪಡೆಯಬೇಕು ಎಂದರು.

ಮುಖ್ಯ ಅತಿಥಿಯಾಗಿದ್ದ ಡಾ.ಉಮಪ್ಪ ಪೂಜಾರಿ ಪಿ. ಮಾತನಾಡುತ್ತಾ ಬದಲಾಗುತ್ತಿರುವ ಜಗತ್ತಿನ ವಿದ್ಯಾಮಾನದೊಂದಿಗೆ ನಾವು ಬದಲಾದರೆ ಮಾತ್ರ ಯಶಸ್ಸು ಕಾಣಲು ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಸಂಚಾಲಕ ವಸಂತ್‌ ಕಾರಂದೂರ್ ವಹಿಸಿದ್ದರು.ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಯತೀನ್,ನಾಯಕಿ ವೃಷ್ಟವಿ,ಕಾರ್ಯದರ್ಶಿ ಅಖಿಲೇಶ್ ಕುಮಾರ್,ಜೊತೆ ಕಾರ್ಯದರ್ಶಿ ಅಕ್ಷಿತಾ ಮತ್ತು ಪವಿತ್ರ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ಆಶಾಲತಾ ಎಸ್‌.ಸುವರ್ಣ ಸ್ವಾಗತಿಸಿದರು.ಅಕ್ಷಿತಾ ವಂದಿಸಿ,ಪ್ರೀತಿಕಾ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *