ಸಾರಿಗೆ ಉದ್ಯಮಿ ರಘುವೀರ್ ಎಸ್.ಡೊಂಗರಕೇರಿ ನಿಧನ
ಮಂಗಳೂರು:ಇಲ್ಲಿನ ಡೊಂಗರಕೇರಿ ನಿವಾಸಿ, ಹಿರಿಯ ಸಾರಿಗೆ ಉದ್ಯಮಿ ರಘುವೀರ್ ಎಸ್.ಡೊಂಗರಕೇರಿ (74) ಇವರು ಹೃದಯಾಘಾತದಿಂದ ಶುಕ್ರವಾರ ನಿಧನರಾದರು. ಮೃತರಿಗೆ ಪತ್ನಿ, ಇಬ್ಬರು ಪುತ್ರರು ಮತ್ತು ಪುತ್ರಿ ಇದ್ದಾರೆ.
ಕಳೆದ ಹಲವು ವರ್ಷಗಳಿಂದ ‘ಪ್ರಗತಿ ಬಸ್’ ಸಾರಿಗೆ ಉದ್ಯಮ ನಡೆಸುತ್ತಿದ್ದ ಇವರು ಜಿಲ್ಲಾ ಗಾಣಿಗ ಸಂಘದ ಹಿರಿಯ ಸದಸ್ಯರಾಗಿದ್ದರು. ಮೃತರ ಅಂತ್ಯಕ್ರಿಯೆ ಮಣ್ಣಗುಡ್ಡ ಸಹೋದರಿ ಮನೆ ಬಳಿ ಶನಿವಾರ ಮಧ್ಯಾಹ್ನ ನೆರವೇರಿತು.