ಬಂಟ್ವಾಳದಲ್ಲಿ ಸಂಭ್ರಮದ ಮೊಸರುಕುಡಿಕೆ ಉತ್ಸವ
ಬಂಟ್ವಾಳ: ಶ್ರೀ ಕೃಷ್ಣ ಜನ್ಮಾಷ್ಟಮಿ ಮೊಸರು ಕುಡಿಕೆ ಸಮಿತಿ,ಶ್ರೀ ಕೃಷ್ಣ ಮಂದಿರ ಭಂಡಾರಿಬೆಟ್ಟು ಬಂಟ್ವಾಳ ಇದರ ಆಶ್ರಯದಲ್ಲಿ ಸಂಭ್ರಮದ ಮೊಸರುಕುಡಿಕೆ ಉತ್ಸವ ಬಂಟ್ವಾಳ ನಗರದಲ್ಲಿ ನಡೆಯಿತು.

ಭಂಡಾರಿಬೆಟ್ಟು ಶ್ರೀ ಕೃಷ್ಣ ಮಂದಿರದಿಂದ ಶ್ರೀ ಕೃಷ್ಣನ ಭಾವಚಿತ್ರವನ್ನು ಪಾಲಕಿಯಲ್ಲಿರಿಸಿ ಹೊರಟ ಶೋಭಾಯಾತ್ರೆ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಳ ಹಾಗೂ ಶ್ರೀ ಕೃಷ್ಣ ಮಠಕ್ಕೆ ಬಂದು ಅಲ್ಲಿಂದ ಹಿಂದಿರುಗಿ ಬಡ್ಡಕಟ್ಟೆ ನಿತ್ಯಾನಂದ ಭಜನಾ ಮಂದಿರದವರೆಗೆ ತೆರಳಿ ಅಲ್ಲಿಂದ ಮುಖ್ಯರಸ್ತೆ ಮೂಲಕ ಬಂಟ್ವಾಳ ತುಂಬೆ ಬೈಪಾಸ್ ಮಾರ್ಗವಾಗಿ ಸಾಗಿ ಶಾಲಾ ಮೈದಾನದಲ್ಲಿ ಸಂಪನ್ನಗೊಂಡಿತು.

ಈ ಸಂದರ್ಭದಲ್ಲಿ ರಸ್ತೆಯುದ್ದಕ್ಕೂ ಭಂಡಾರಿಬೆಟ್ಟು ಯುವಜನ ವ್ಯಾಯಾಮ ಶಾಲೆಯ ಸದಸ್ಯರು ಪಿರಮಿಡ್ ರಚಿಸಿ ಮಡಕೆ ಒಡೆಯುವುದು,ಬಿ.ಸಿ.ರೋಡು ಚಿಲಿಪಿಲಿ ಗೊಂಬೆ ಬಳಗದ ಕೀಲುಕುದುರೆ,ಗೊಂಬೆಕುಣಿತ,ಮಕ್ಕಳ ಕುಣಿತ ಭಜನೆ ಶೋಭಾಯಾತ್ರೆಗೆ ಮೆರಗುನೀಡಿತು.

ಬಳಿಕ ಎಸ್ ವಿ ಎಸ್ ಪ್ರೌಢಶಾಲಾ ಮೈದಾನದಲ್ಲಿ ಮಹಿಳೆಯರು,ಪುರುಷರು,ಮಕ್ಕಳಿಗೆ ವಿವಿಧ ಸ್ಪರ್ಧೆಗಳು ನಡೆಯಿತು.ಸಂಜೆ ಸಭಾ ಕಾರ್ಯಕ್ರಮ,ಪ್ರತಿಭಾ ಪುರಸ್ಕಾರ,ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ,ರಾತ್ರಿ ತುಳು ನಾಟಕ ನಡೆಯಿತು.