ಬಡಗಬೆಳ್ಳೂರು ಮೊಸರು ಕುಡಿಕೆ ಉತ್ಸವ
ಕೈಕಂಬ: ಸೆ.೦೭ ಗುರುವಾರದಂದು ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನ ಬಡಗಬೆಳ್ಳೂರಿನಲ್ಲಿ ಮೊಸರು ಕುಡಿಕೆ ಉತ್ಸವ ನಡೆಯಲಿರುವುದು.

ವಿವಿಧ ಸ್ಪರ್ಧೆಗಳು: ಬಾಲಕ ಮತ್ತು ಬಾಲಕಿಯರಿಗೆ ಸಂಗೀತ ಕುರ್ಚಿ,ಕಬಡ್ಡಿ,ಮಡಕೆ ಒಡೆಯುವುದು,ಬಲೂನ್ ಒಡೆಯುವುದು,ಲಿಂಬೆ ಚಮಚ,ಸಂಗೀತ ಸ್ಪರ್ಧೆ.ಯುವತಿಯರ ವಿಭಾಗದಲ್ಲಿ ತ್ರೋಬಾಲ್,ಹಗ್ಗ ಜಗ್ಗಾಟ,ಸಂಗೀತ ಕುರ್ಚಿ,ಮಡಕೆ ಒಡೆಯುವುದು,ಹಾಗೂ
ಯುವಕರ ವಿಭಾಗದಲ್ಲಿ ವಾಲಿಬಾಲ್,ಮಡಕೆ ಒಡೆಯುವುದು,ಕಬಡ್ಡಿ(ಆಹ್ವಾನಿತ ತಂಡಗಳು) ಮುಂತಾದ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಅಡಿಕೆ ಮರ ಹತ್ತುವ ಸ್ಪರ್ಧೆಯಲ್ಲಿ ಬಹುಮಾನವಾಗಿ ಒಂದು ಮುಡಿ ಅಕ್ಕಿ ಮತ್ತು ಟ್ರೋಫಿಯನ್ನು ಗೆಲ್ಲಬಹುದು.
ಅಂತೆಯೆ ಸಂಜೆ ೫:೦೦ ಗಂಟೆಯಿಂದ ಶ್ರೀ ಕೃಷ್ಣ ದೇವರ ಮೆರವಣಿಗೆ ಮೂಲಕ ಮೊಸರು ಕುಡಿಕೆ ಉತ್ಸವ ನಡೆಯಲಿರುವುದು ಎಂದು ಬಡಗಬೆಳ್ಳೂರು ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನದ ಪ್ರಕಟಣೆ ತಿಳಿಸಿದೆ.