ರಾಮಕೃಷ್ಣ ತಪೋವನ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಅಖಂಡ ಭಜನೆ
ಪೊಳಲಿ: ಸೆ.೫ ಮಂಗಳವಾರ ರಾಮಕೃಷ್ಣ ತಪೋವನ ಪೊಳಲಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಪ್ರಯುಕ್ತ ದಾವಣಗೆರೆ ರಾಮಕೃಷ್ಣ ಮಿಶನ್‌ನ ಪೂಜ್ಯ ಸ್ವಾಮಿ ತ್ಯಾಗೀಶ್ವರಾನಂದಜೀ ಮಹಾರಾಜ್ ದೀಪ ಪ್ರಜ್ವಲನೆ ಮೂಲಕ ಅಖಂಡ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ರಾಮಕೃಷ್ಣ ತಪೋವನದ ಸ್ವಾಮೀ ವಿವೇಕ ಚೈತನ್ಯಾನಂದ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಬೆಳಗ್ಗೆ ಗಂಟೆ ೮.೩೦ಕ್ಕೆ ಪೊಳಲಿ ಶ್ರೀ ರಾಜರಾಜೇಶ್ವರೀ ಭಜನಾ ತಂಡದಿಂದ ಅಖಂಡ ಭಜನಾ ಕಾರ್ಯಕ್ರಮವು ಆರಂಭವಾಯಿತು.