ರಾಮಕೃಷ್ಣ ತಪೋವನ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ
ಪೊಳಲಿ: ರಾಮಕೃಷ್ಣ ತಪೋವನ ಪೊಳಲಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಪ್ರಯುಕ್ತ ಸೆ.೫ರಂದು ಬೆಳಗ್ಗೆ ೮ ಗಂಟೆಗೆ ದಾವಣಗೆರೆ ರಾಮಕೃಷ್ಣ ಮಿಶನ್‌ನ ಕಾರ್ಯದರ್ಶಿ ಪೂಜ್ಯ ಸ್ವಾಮಿ ತ್ಯಾಗೀಶ್ವರಾನಂದಜೀ ಮಹಾರಾಜ್ ರಿಂದ ಅಖಂಡ ಭಜನಾ ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು.
ಗಂಟೆ ೮.೩೦ರಿಂದ ೨೭ ಗಂಟೆಗಳವರೆಗೆ ವಿವಿಧ ಭಜನಾ ಮಂಡಳಿಗಳಿಂದ ನಿರಂತರ ಭಜನಾ ಕಾರ್ಯಕ್ರಮ ನಡೆಯಲಿದೆ.
ಸೆ.೬ರಂದು ಬುಧವಾರ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಬೆಳಗ್ಗೆ ೮:೩೦ಕ್ಕೆ ಭಜನಾ ಮಂಗಳೋತ್ಸವ,೧೦:೩೦ಗಂಟೆ ರಿಂದ ೧೧:೩೦ರ ವರೆಗೆ ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ ಮತ್ತು ತುಳಸಿ ಅರ್ಚನೆ,೧೧:೩೦ರಿಂದ ೧೧:೪೫ರ ವರೆಗೆ ಅಭಿಷೇಕ,೧೧:೪೫ರಿಂದ ೧೨:೩೦ರ ವರೆಗೆ ಮಹಾಮಂಗಳಾರತಿ,ಮಧ್ಯಾಹ್ನ ೧೨:೩೦ರಿಂದ ಸಾರ್ವಜನಿಕ ಅನ್ನಸಂತರ್ಪಣೆ,ಮಧ್ಯಾಹ್ನ ೧:೩೦ ರಿಂದ ೬ ಗಂಟೆಯವರೆಗೆ ಮಕ್ಕಳ ಛದ್ಮವೇಷ ಸ್ಪರ್ಧೆ ಹಾಗೂ ಬಹುಮಾನ ವಿತರಣೆ,ಸಂಜೆ ೬ ರಿಂದ ೬.೩೦ಕ್ಕೆ ವಿಶೇಷ ಭಜನೆ ಸಂಜೆ ೬.೩೦ಕ್ಕೆ ಸಂಧ್ಯಾರತಿ.
ಸೆ. ೭ರಂದು ಗುರುವಾರ ಮೊಸರು ಕುಡಿಕೆ ಉತ್ಸವ (ಶ್ರೀ ಕೃಷ್ಣ ಲೀಲೋತ್ಸವ) ಶ್ರೀ ಕೃಷ್ಣನ ಮೆರವಣಿಗೆ ಮತ್ತು ಮೊಸರು ಕುಡಿಕೆ ಉತ್ಸವ ಎಂದು ರಾಮಕೃಷ್ಣ ತಪೋವನದ ಅಧ್ಯಕ್ಷ ಸ್ವಾಮಿ ವಿವೇಕಚೈತನ್ಯಾನಂದ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.