ಸೆ.೭ರಂದು ನಾಗಶ್ರೀ ಮಿತ್ರವೃಂದದಿಂದ ೨೨ನೇ ವರ್ಷದ ಮೊಸರು ಕುಡಿಕೆ ಉತ್ಸವ
ಕೈಕಂಬ: ತೆಂಕಬೆಳ್ಳೂರಿನ ಕಮ್ಮಾಜೆಯಲ್ಲಿ ಸೆ.೭ರಂದು ನಾಗಶ್ರೀ ಮಿತ್ರವೃಂದ ಹಾಗೂ ನಾಗಶ್ರೀ ಮಾತ್ರವೃಂದದ ಸಹಭಾಗಿತ್ವದಲ್ಲಿ ತೆಂಕಬೆಳ್ಳೂರಿನ ಕಮ್ಮಾಜೆಯ ವಿವೇಕ ಭವನದ ಬಳಿ ಮಾಜಿ ಸೈನಿಕ ಪದ್ಮನಾಭ ಪೊಯ್ಯೆ ಕ್ರೀಡಾಂಗಣದಲ್ಲಿ ೨೨ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಉತ್ಸವ ಶ್ರೀ ಕೃಷ್ಣ ದೇವರ ಶೋಭಾಯಾತ್ರೆ ನಡೆಯಲಿರುವುದು.
ಈ ಕಾರ್ಯಕ್ರಮಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಸಹಿತ ಹಲವು ಗಣ್ಯರು ಆಗಮಿಸಲಿದ್ದಾರೆ ಎಂದು ನಾಗಶ್ರೀ ಮಿತ್ರವೃಂದದ ಪ್ರಕಟಣೆ ತಿಳಿಸಿದೆ.