ಬೆಳ್ಳೂರು ವಲಯದ ಬಂಟರ ಸಂಘದ ವತಿಯಿಂದ “ಸೋಣ ಸಂಭ್ರಮ”
ಕೈಕಂಬ: ಬೆಳ್ಳೂರು ವಲಯದ ಬಂಟರ ಸಂಘದ ವತಿಯಿಂದ “ಸೋಣ ಸಂಭ್ರಮ” ಅಮುಂಜೆ ಶ್ರೀ ವಿನಾಯಕ ಜನಾರ್ಧನ ಸದಾಶಿವ ದೇವಸ್ಥಾನದಲ್ಲಿ ಭಾನುವಾರ ನಡೆಯಿತು.
ನಾವೇನು ಸೋಣ ಸಂಭ್ರಮವೆಂದು ಆಚರಣೆ ಮಾಡುತ್ತಾಇದ್ದೇವೆ ಆಟಿ, ಸೋಣ ತಿಂಗಳಲ್ಲಿ ಮಳೆ ಇಲ್ಲದೆ ಬೆಳೆ ಇಲ್ಲ ಕೃಷಿ ಮಾಡಲು ನೀರಿಲ್ಲ ಈಗೇಯೆ ಮುಂದುವರಿದರೆ ಮುಂದೊಂದು ದಿನ ಮನುಕುಳ ಸರ್ವನಾಶವಾಗಬಹುದು ದೇವರು ಸೃಷ್ಟಿಮಾಡಿದ ಮನುಕುಳಕ್ಕೆ ಬೆಲೆಯೇ ಇಲ್ಲದಂತಾಗಬಾರದು ಅದಕ್ಕಾಗಿ ನಾವೆಲ್ಲರು ನಂಬಿದ ಭಗವಂತನ ನಾಮಸ್ಮರಣೆ ಮಾಡಿ ಒಟ್ಟಾಗಿ ದೇವರಲ್ಲಿ ಪ್ರಾರ್ಥಿಸಬೇಕು. ಎಂದು ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಹೇಳಿದರು.
ಅವರು ಭಾನುವಾರ ಬೆಳ್ಳೂರು ವಲಯದ ಬಂಟರ ಸಂಘದ ವತಿಯಿಂದ “ಸೋಣ ಸಂಭ್ರಮ” ಸಭಾ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ತುಳುನಾಡಿನಲ್ಲಿ ದೇವಸ್ಥಾನಗಳ ಜೀರ್ಣೋದ್ದಾರಗಳ ಕಾರ್ಯಗಳಲ್ಲಿ ಬಂಟಸಮಾಜವು ನೀಡಿದ ಕೊಡುಗೆ ಅನನ್ಯ ಬೆಳ್ಳೂರು ಬಂಟರ ಸಂಘವು ಉತ್ತಮ ಕೆಲಸ ಕಾರ್ಯಗಳನ್ನು ಮಾಡಲು ದೇವರು ಅನುಗ್ರಹಿಸಲಿ ಎಂದು ಆಶೀರ್ವದಿಸಿದರು.
ಮುಖ್ಯ ಅತಿಥಿಗಳಾಗಿ ಬಂಟವಾಳ ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ಡಿ.ಶೆಟ್ಟಿ ಮಾತನಾಡಿ ಬಂಟ್ವಾಳ ತಾಲೂಕಿನಲ್ಲಿ ೧೭ ವಲಯದವರನ್ನು ಸೇರಿಸಿ ದೊಡ್ಡಮಟ್ಟದ ಕ್ರೀಡಾಕೂಟ, ಸಾಮೂಹಿಕ ಸತ್ಯನಾರಾಯಣ ಪೂಜೆ, ವಿದ್ಯಾರ್ಥಿವೇತನ ಹಲವಾರು ಕಾರ್ಯಕ್ರಮಗಳು ಬಂಟವಾಳ ಬಂಟರ ಸಂಘದ ವತಿಯಿಂದ ಹಮ್ಮಿಕೊಂಡಿದ್ದೇವೆ ಎಂದರು.
ಬೆಳ್ಳೂರು ವಲಯದ ಬಂಟರ ಸಂಘದ ಅಧ್ಯಕ್ಷ ಜನಾರ್ಧನ ಶೆಟ್ಟಿ ಕನ್ಯಾಬೆಟ್ಟು ಅಧ್ಯಕ್ಷತೆ ವಹಿಸಿ ಮಾತನಾಡಿ ಬಂಟ ಸಮಾಜದ ಕಡುಬಡವರಿಗೆ ಮನೆ ಕಟ್ಟಲು ಸಹಾಯ,ಮುಂತಾದ ಕಾರ್ಯಗಳನ್ನು ಮಾಡುತ್ತಾ ಬಂದಿದೆ.ಇನ್ನೂ ಮುಂದಕ್ಕೆ ಕರಿಯಂಗಳ, ಬಡಗಬೆಳ್ಳೂರು, ತೆಂಕಬೆಳ್ಳೂರು, ಕೂರಿಯಾಳ, ಅಮ್ಮುಂಜೆ ಐದುಗ್ರಾಮಕ್ಕೆ ಒಂದು ಸುಸಜ್ಜಿತವಾದ ಬಂಟರ ಸಂಘ ನಿರ್ಮಾಣ ಮಾಡಲು ಎಲ್ಲರು ಕೈಜೋಡಿಸಲು ಕರೆನೀಡಿದರು. ಸಭಾ ಕಾರ್ಯಕ್ರಮದ ಮೊದಲು ಸತ್ಯನಾರಾಯಣ ಪೂಜೆ ನೆರವೇರಿತು.
ಇದೇ ಸಂದರ್ಭದಲ್ಲಿ ಕರಿಯಂಗಳ ,ತೆಂಕಬೆಳ್ಳೂರು, ಕೂರಿಯಾಳ ಅಂಗನವಾಡಿ ಕೇಂದ್ರಕ್ಕೆ ಪೀಠೋಪಕರಣಗಳನ್ನು ಹಾಗೂ ವಿದ್ಯಾರ್ಥಿವೇತನ ನೀಡಲಾಯಿತು.
ಬೆಳ್ಳೂರು ಬಂಟರ ವಲಯದ ಗೌರವಾಧ್ಯಕ್ಷ ರಘುನಾಥ ಪಯ್ಯಡೆ ಕೂರಿಯಾಳಗುತ್ತು, ಬಂಟವಾಳ ಬಂಟರ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ರಮಾ ಎಸ್ ಭಂಡಾರಿ, ಪುಷ್ಪರಾಜ್ ಶೆಟ್ಟಿ ,ಬೆಳ್ಳೂರು ವಲಯದ ಉಪಾಧ್ಯಕ್ಷೆ ಸಂಧ್ಯಾ ರೈ, ಸುಧೀರ್ ಪೂಂಜ, ಕರುಣಾಕರ ಶೆಟ್ಟಿ, ಲಕ್ಷ್ಮೀಶ್ ಶೆಟ್ಟಿ, ಶೇಖರ್ ಸಾಮಾನಿ ,ರಿತೇಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಬೆಳ್ಳೂರು ಬಂಟರ ವಲಯದ ಕಾರ್ಯದರ್ಶಿ ನರೇಶ್ ಕುಮಾರ್ ಶೆಟ್ಟಿ ಪ್ರಾಸ್ತಾವಿಸಿದರು. ಶಾಲಿನಿ ಜನಾರ್ಧನ ಶೆಟ್ಟಿ ಪ್ರಾರ್ಥಿಸಿದರು. ಕಿಶೋರ್ ಭಂಡಾರಿ ಸ್ವಾಗತಿಸಿ, ಪುಷ್ಪರಾಜ್ ಶೆಟ್ಟಿ ನಿರೂಪಿಸಿ. ಪ್ರಣಾಮ್ ಶೆಟ್ಟಿ ವಂದಿಸಿದರು.