ಭಾರತೀಯ ಜೀವ ವಿಮಾ ನಿಗಮ ೬೭ ನೇ ವಿಮಾ ಸಪ್ತಾಹ
ಕೈಕಂಬ: ಭಾರತೀಯ ಜೀವ ವಿಮಾ ನಿಗಮ ಬಂಟ್ವಾಳ ಶಾಖೆಯಲ್ಲಿ ೬೭ ನೇ ವಿಮಾ ಸಪ್ತಾಹ ದ ಉದ್ಘಾಟನೆ ಸೆ.೦೧ ರಂದು ನಡೆಯಿತು. ಪ್ರಥಮ ಗ್ರಾಹಕ ಶ್ರೀಯುತ ಪುಪ್ಪ ರಾಜ್ ಹೆಗ್ಡೆ ಯವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿ ಟ್ರಾಫಿಕ್ ಇನ್ಸ್ಪೆಕ್ಟರ್ ಸುತೇಶ್ ಕೆ ಪಿ ವಿಮಾ ಸೇವೆಯ ಬಗ್ಗೆ ಕೊಂಡಾಡಿ ಪಾಲಿಸಿ ಪಡೆದುಕೊಂಡು ತನಗೆ ಆದ ಲಾಭದ ಬಗ್ಗೆ ವಿವರಿಸಿದರು.
ಅಧ್ಯಕ್ಷತೆ ವಹಿಸಿದ ಶಾಖೆಯ ಮುಖ್ಯ ಪ್ರಬಂಧಕ ಕೆ ಸತೀಶ್ ಕುಮಾರ್ ರಾಷ್ಟ್ರೀಕರಣ ಆದ ನಂತರ ಸಂಸ್ಥೆ ಯ ಬೆಳವಣಿಗೆ ದೇಶದ ಅಭಿವೃದ್ಧಿಗೆ ಸಂಸ್ಥೆಯ ಕೊಡುಗೆಯನ್ನು ವಿವರಿಸಿ ಸಂಸ್ಥೆಯ ತುರಿತ, ಶೀಘ್ರದ ಸೇವೆಗಳನ್ನು ವಿವರಿಸಿದರು.ನಿಗಮ್ ಗೀತೆಯ ಮೂಲಕ ಆರಂಭವಾದ ಕಾರ್ಯಕ್ರಮದಲ್ಲಿ ಸಿಬ್ಬಂದಿಗಳು ಪ್ರತಿಜ್ಞೆ ಸ್ವೀಕರಿಸಿದರು.
ಆಡಳಿತ ಅಧಿಕಾರಿ ವಾದಿರಾಜ, ಉದಯ ಪಾಲ್,ವೈಲೆಟ್ ಡಿ ಸಿಲ್ವ,ಲಲಿತ ಜಯರಾಮ್,ಸುರೇಶ್,ರವಿ ಕುಮಾರ್,ಸಹಾಯಕ ಶಾಖಾದಿಕಾರಿ ಕೃಪಾಲ್,ಪ್ರತಿನಿಧಿಗಳಾದ ಶಿವರಾಯ ಕಾಮತ್,ರೋಹಿದಾಸ್ ಕುಂದರ್, ಲಯನ್ಸ್ ಕ್ಲಬ್ ನ ಅಧ್ಯಕ್ಷ ಪ್ರಶಾಂತ್ ಕೋಟಿಯನ್ ಮುಂತಾದ ದವರು ಉಪಸ್ಥಿತ ರಿದ್ದರು ಕಾರ್ಯಕ್ರಮದ ನಿರೂಪಣೆಯನ್ನು ಮಧ್ವರಾಜ್ ಕಲ್ಮಾಡಿ ನೆರವೇರಿಸಿದ್ದರು.