ಸೆ.೭ರಂದು ಶ್ರೀ ಕಾವೇಶ್ವರ ಭಕ್ತವೃಂದ ಮೊಸರುಕುಡಿಕೆ ಉತ್ಸವ
ಕೈಕಂಬ: ಬಂಟ್ವಾಳ ತಾಲೂಕಿನ ಬಟ್ಟಾಜೆ ಶ್ರೀ ಕಾವೇಶ್ವರ ಭಕ್ತವೃಂದ ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಸೆ.೭ರಂದು ಗುರುವಾರ ಬೆಳಗ್ಗೆ ೯ ಗಂಟೆಯಿಂದ ರಾತ್ರಿ ೧೦ ಗಂಟೆಯವರೇಗೆ ಮೊಸರುಕುಡಿಕೆ ಉತ್ಸವ ನಡೆಯಲಿದೆ.
ಕಾರ್ಯಕ್ರಮಗಳು:
ಬೆಳಗ್ಗೆ ೧೦ ಗಂಟೆಗೆ ಮಹಿಳಾ ಸದಸ್ಯೆಯರಿಂದ ದೀಪ ಬೆಳಗಿಸುವಿಕೆ,ಮಕ್ಕಳಿಂದ ಪ್ರಾರ್ಥನೆ
ವಿವಿಧ ಸ್ಪರ್ಧೆಗಳು:
ಬೆಳಗ್ಗೆ೧೦.೩೦ರಿಂದ ೧೨ ಗಂಟೆಯವರೆಗೆ ಮಕ್ಕಳಿಗೆ ಆಟೋಟ ಸ್ಪರ್ಧೆ, ೧೧ರಿಂದ ೧೨.೩೦ರವರೆಗೆ ಮಹಿಳೆಯರಿಗೆ ಮತ್ತು ಪುರುಷರಿಗೆ ವಿವಿಧ ಸ್ಪರ್ಧೆ ಮಧ್ಯಾಹ್ನ ೨ರಿಂದ ೪ ಗಂಟೆಯವರೆಗೆ ಮಹಿಳೆಯರಿಗೆ ಸ್ಪರ್ಧೆ, ಸಂಜೆ ಗಂಟೆ ೪ರಿಂದ ೫ಗಂಟೆಯವರೆಗೆ ಮಹಿಳೆಯರಿಗೆ ಮತ್ತು ಪುರುಷರಿಗೆ ಹಗ್ಗ ಜಗ್ಗಾಟ,೫ರಿಂದ ೬ಗಂಟೆಯವರೆಗೆ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಭಕ್ತಿಗೀತೆ ಸ್ಪರ್ಧೆ,ರಾತ್ರಿ ಗಂಟೆ ೬ರಿಂದ ೭ಗಂಟೆಯವರೆಗೆ ಸಭಾಕಾರ್ಯಕ್ರಮ ಮತ್ತು ಬಹುಮಾನ ವಿತರಣೆ ಯು ದೈವ ಪಾತ್ರಿಗಳಾದ ಕೊಪ್ಪಲ ಉಮನಾಥ ಸಪಲ್ಯ ಇವರ ಅಧ್ಯಕ್ಷತೆಯಲ್ಲಿ,ಉದ್ಯಮಿ ರಾಜೇಶ್ ಜೈನ್ ಕೊಯಿಲ , ಬಿಜೆಪಿ ಯುವಮೋರ್ಚಾ ಬಂಟ್ವಾಳ ಮಂಡಲದ ಅಧ್ಯಕ್ಷ ಕಿಶೋರ್ ಪಲ್ಲಿಪಾಡಿ, ಹಿಂದೂ ಜಾಗರಣ ವೇದಿಕೆಯ ನಿಕಟಪೂರ್ವ ಅಧ್ಯಕ್ಷ ತಿರುಲೇಶ್ ಕಾವೇಶ್ವರ, ಎಲೆಕ್ಟ್ರಿಕಲ್ ಕಾಂಟ್ರಾಕ್ಟರ್ ಕುಶ ಕುಮಾರ್ ಸಾಣಕಟ್ಟ, ಉದ್ಯಮಿ ಪ್ರವೀಣ್ ಶೆಟ್ಟಿ ಬಾಗಂತ್ರಬೈಲು, ಶ್ರೀ ಕಾವೇಶ್ವರ ಭಕ್ತವೃಂದ ಬಟ್ಟಾಜೆಯ ಅಧ್ಯಕ್ಷ ದಿನೇಶ್ ಬಟ್ಟಾಜೆ ಇವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ.
ರಾತ್ರಿ ೭ರಿಂದ ೮ ಗಂಟೆಯವರೆಗೆ ಮಕ್ಕಳು ಮತ್ತು ಮಹಿಳೆಯರಿಂದ ನೃತ್ಯ ಕಾರ್ಯಕ್ರಮ, ,೮ರಿಂದ ೧೦ಗಂಟೆಯವರೆಗೆ ಶ್ರೀ ಕಾವೇಶ್ವರ ಭಕ್ತ ವೃಂದ ಬಟ್ಟಾಜೆ ಮತ್ತು ಅಥಿತಿ ಕಲಾವಿದರಿಂದ ರಮೇಶ್ ಎಸ್. ಬಟ್ಟಾಜೆ ನಿರ್ದೇಶನದ ಚರಣ್ ಕುಲಾಲ್ ಬಟ್ಟಾಜೆ ರಚನೆಯ ಸಿಪಿಎಲ್ ಖ್ಯಾತಿಯ ಗಣೇಶ್ ಪಾಪುದಡ್ಕ ಅಭಿನಯದ ತುಳು ಸಾಂಸಾರಿಕ ಹಾಸ್ಯಮಯ ನಾಟಕ “ಪೊಣ್ಣು ಬಾಲೆ” ಪ್ರದರ್ಶನಗೊಳ್ಳಲಿದೆ. ಎಂದು ಶ್ರೀ ಕಾವೇಶ್ವರ ಭಕ್ತವೃಂದ ಬಟ್ಟಾಜೆ ಇದರ ಪ್ರಕಟನೆ ತಿಳಿಸಿದೆ.