ಬಂಟ್ವಾಳ ತಾಲೂಕು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಡಾ ಸುರೇಶ ನೆಗಳಗುಳಿ
ಬಂಟ್ವಾಳ: ಬಂಟ್ವಾಳ ತಾಲೂಕು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತುನ ೨೩-೨೪ ಸಾಲಿಗೆ ಅಧ್ಯಕ್ಷರಾಗಿ ಡಾ ಸುರೇಶ ನೆಗಳಗುಳಿ ಅವರು ಪುನರಾಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಬಜಾಲ್ ಪಕ್ಕಲಡ್ಕದ ಸುಹಾಸ ನಿವಾಸಿಯಾಗಿರುವ ಅವರು ಮೂಲತ: ಬಂಟ್ವಾಳ ತಾಲೂಕಿನ ಅಳಿಕೆ ಗ್ರಾಮದ ನೆಗಳಗುಳಿಯವರಾಗಿದ್ದಾರೆ.
ಉಳಿದಂತೆ ಪದಾಧಿಕಾರಿಗಳು ಈ ಕೆಳಗಿನಂತಿದ್ದಾರೆ.
ಉಪಾಧ್ಯಕ್ಷರು – ಈಶ್ವರ ಪ್ರಸಾದ್ ಕಾರ್ಯದರ್ಶಿ -ಚೇತನ್ ಮುಂಡಾಜೆ, ಜೊತೆ ಕಾರ್ಯದರ್ಶಿ – ಸೀತಾ ಲಕ್ಷ್ಮೀ ವರ್ಮಾ, ಕೋಶಾಧಿಕಾರಿ – ಪ್ರಶಾಂತ್ ಕಡ್ಯ, ಕೂಟ ಪ್ರಮುಖ್ – ಅಶೋಕ ಕುಮಾರ್ ಕಲ್ಯಾಟೆ, ಮಾಧ್ಯಮ ಪ್ರಮುಖ್ -ಚಿನ್ನಪ್ಪ ಎಮ್ ಅವರು ಆಯ್ಕೆಯಾಗಿದ್ದಾರೆ.
ಕಾರ್ಯಕಾರಿ ಸಮಿತಿ
ಸದಸ್ಯರಾಗಿ ಉದಯ ಸಂತೋಷ್,
ಬಾಲಕೃಷ್ಣ ಕೇಪುಳು, ರಮೇಶ್ ಬಾಯಾರ್, ಜಯರಾಮ ಪಡೆ ,ಕುಮಾರ ಸ್ವಾಮಿ ಕನ್ಯಾನ, ಚಂದ್ರಶೇಖರ ಕೈಯಾಬೆ, ರಶ್ಮಿತಾ ಸುರೇಶ ಜೋಗಿಬೆಟ್ಟು ,ಚೈತನ್ಯ ಪ್ರಕಾಶ್ ಕೆದಿಲ, ಗೋವಿಂದ ನಾರಾಯಣ ಅವರು ಆಯ್ಕೆಯಾಗಿದ್ದಾರೆ.
ಗೌರವ ಸಲಹೆಗಾರರಾಗಿ ಜಯಾನಂದ ಪೆರಾಜೆ ಆಯ್ಕೆಯಾಗಿದ್ದಾರೆಎಂದು ಪ್ರಕಟಣೆ ತಿಳಿಸಿದೆ.