ಕೈಕಂಬ: ಬೈಲ್ ಫ್ರೆಂಡ್ಸ್ ಮೂಡುಕರೆ ಕಂದಾವರ ಇದರ ವತಿಯಿಂದ ʼಕೆಸರ್ಡ್‌ ಒಂಜಿ ದಿನʼ ಬೈಲು ಮಾಗಣೆ ಶ್ರೀ ಧೂಮಾವತಿ ದೈವಸ್ಥಾನದ ಮುಂಭಾಗದ ಗದ್ದೆಯಲ್ಲಿ ನಡೆಯಿತು.

ಶ್ರೀ ಧೂಮಾವತಿ ಪರಿವಾರ ದೈವಗಳನ್ನು ಪ್ರಾರ್ಥಿಸಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀ ಧೂಮಾವತಿ ದೈವಸ್ಥಾನದ ಆಡಳಿತ ಮೊಕ್ತೇಸರರು ಹಾಗೂ ಪ್ರಸಿದ್ಧ ಅಂತರ್ ರಾಷ್ಟ್ರೀಯ ಕ್ರೀಡಾ ಪಟುವಾದ ಕೆ ಶ್ರೀಧರ ಆಳ್ವ ಕಂದಾವರ ಬಾಳಿಕೆ ಇವರು ಮಾತನಾಡಿ ನಮ್ಮ ಹಿರಿಯರೆಲ್ಲ ದಿನದ ಬಹು ಸಮಯವನ್ನು ಜೇವನೋಪಾಯಕ್ಕಾಗಿ ಗದ್ದೆಯಲ್ಲೇ ಕಳೆದು ನಿರಂತರ ಕೆಸರಿನ ಸ್ಪರ್ಶದಿಂದ ಆರೋಗ್ಯ ವಂತರಾಗಿದ್ದರು ಆದರೆ ಇಂದು ಆ ಪರಿಸ್ಥಿತಿ ಇಲ್ಲ ನಮ್ಮ ಕಂದಾವರದಲ್ಲಿ ಪ್ರಥಮವಾಗಿ ಕೆಸರ್ಡ್ ಒಂಜಿ ದಿನ ‌ಕಾರ್ಯಕ್ರಮ ಆಯೋಜಿಸಿದ ಬೈಲ್ ಫ್ರೆಂಡ್ಸ್‌ ನ ಕೆಲಸ ಶ್ಲಾಘನೀಯ ಎಂದರು.

ಕಾರ್ಯಕ್ರಮದಲ್ಲಿ ಹಿರಿಯರಾದ ಮೂಡುಕರೆ ಗುತ್ತು ಕೊರಗ ಶೆಟ್ಟಿ,ಬಂಟ ಸಾನ ನಾರಾಯಣ ಪೂಜಾರಿ,ಬೈಲು ಮೇಗಿನ ಮನೆ ಮಹೇಶ್ ಹೆಗ್ಡೆ, ರವೀಂದ್ರ ಭಂಡಾರಿ, ಕಂದಾವರ ಪಂಚಾಯತ್ ಅಧ್ಯಕ್ಷೆ ಶಾಲಿನಿ ಶಶಿಕಾಂತ್, ಉಪಾಧ್ಯಕ್ಷ ಉದಯ ರಾವ್, ಪಂಚಾಯತ್ ಸದಸ್ಯರು ಹಾಗೂ ಬೈಲ್ ಫ್ರೆಂಡ್ಸ್ ನ ಪ್ರಮುಖರಾದ ಸಂಪತ್ ಪೂಜಾರಿ,ಬೈಲ್ ಫ್ರೆಂಡ್ಸ್ ನ ಅಧ್ಯಕ್ಷ ಚೇತನ್ ಮೂಡುಕರೆ,ಅದ್ಯಾಪಾಡಿ ಆಧಿನಾಥೆಶ್ವರ ದೇವಸ್ಥಾನದ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಬೈಲು ಏತ ಮೊಗರು ಗುತ್ತು ಸುಜಿತ್ ಆಳ್ವ ,ಅದ್ಯಾಪಾಡಿ ಗುತ್ತು ರಾಜೀವ ಆಳ್ವ ,ಕಂದಾವರ ಮೇಗಿನ ಮನೆ ಪ್ರಕಾಶ್ ಶೆಟ್ಟಿ,ವಾಲ್ಟರ್ ಕೌಡುರು,ಬಿಲ್ಲವ ಸಂಘ ಕಂದಾವರ ಇದರ ಅಧ್ಯಕ್ಷ ಸಂತೋಷ್ ಪೂಜಾರಿ,ಪೆರ್ಮಂಕಿ ಗುತ್ತು ಕಿರಣ್ ಪಕ್ಕಳ , ಸುಕೇಶ್ ಮಾನೈ, ಸೋಹನ್ ಅತಿಕಾರಿ, ಸಂಜೀವ ನಲಿಕೆ, ಬಾಲಕೃಷ್ಣ ಕಾವ,ಉಮೇಶ್ ಭಂಡಾರಿ,ದಿವಾಕರ ಶೆಟ್ಟಿ,ಸುರೇಂದ್ರ ಶೇಣವ,ಸತೀಶ್ ಶೆಟ್ಟಿ, ಅಶೋಕ್ ಪೂಜಾರಿ,ಕೃಷ್ಣಪ್ಪ ಪೂಜಾರಿ,ವಿಶ್ವನಾಥ್ ಕೋಟ್ಯಾನ್,ದಿನೇಶ್ ಕಂದಾವರ,ಪದವ್ ಮೋಹನ್ ಶೆಟ್ಟಿ,ಸುಧಾಕರ್ ಕೊಳಂಬೆ,ಶ್ರೀನಾಥ್ ಶೆಟ್ಟಿ, ತೆಂಜ ಬೈಲ್ ಫ್ರೆಂಡ್ಸ್ ನ ಉಪಾಧ್ಯಕ್ಷ ಪುನೀತ್‌,ಸಂತೋಷ್ ಆಚಾರ್ಯ ಸದಸ್ಯರುಗಳಾದ ಹರೀಶ್ ಪೂಜಾರಿ‌,ಅಶೋಕ್ ಸಾಲ್ಯಾನ್,ಬಾಲಕೃಷ್ಣ ಸಾಲ್ಯಾನ್,ಮುರಳಿ ಮತ್ತಿತರರು ಉಪಸ್ಥಿತರಿದ್ದರು.

ಮಕ್ಕಳಿಗೆ ಮಹಿಳೆಯರಿಗೆ ಪುರುಷರಿಗೆ ಹಾಗೂ ಹಿರಿಯರಿಗೆ ಕೆಸರಿನ ಗದ್ದೆಯಲ್ಲಿ ಹಗ್ಗ ಜಗ್ಗಾಟ, ವಾಲಿ ಬಾಲ್,೧೦೦ ಮೀಟರ್ ಓಟ, ಲಿಂಬೆ ಚಮಚ ಓಟ, ಮಡಲ್ ಹೆಣೆಯುವ ಸ್ಪರ್ಧೆ, ಉಪ್ಪು ಮುಡಿ ಮುಂತಾದ ಸ್ಪರ್ಧೆಗಳನ್ನು ನಡೆಸಲಾಯಿತು. ಸತೀಶ್ ಶೆಟ್ಟಿ ಕಂದಾವರ ಮತ್ತು ತೇಜಸ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು ಮುರಳಿ ಸಹಕರಿಸಿದರು.

By suddi9

Leave a Reply

Your email address will not be published. Required fields are marked *