ಬೈಲ್ ಫ್ರೆಂಡ್ಸ್ ಮೂಡುಕರೆ ಕಂದಾವರ ಇದರ ವತಿಯಿಂದ ಕೆಸರ್ಡ್ ಒಂಜಿ ದಿನ
ಕೈಕಂಬ: ಬೈಲ್ ಫ್ರೆಂಡ್ಸ್ ಮೂಡುಕರೆ ಕಂದಾವರ ಇದರ ವತಿಯಿಂದ ಕೆಸರ್ಡ್ ಒಂಜಿ ದಿನ ಕಾರ್ಯಕ್ರಮವು ಭಾನುವಾರ ಬೈಲು ಮಾಗಣೆ ಶ್ರೀ ಧೂಮಾವತಿ ದೈವಸ್ಥಾನದ ಮುಂಭಾಗದ ಗದ್ದೆಯಲ್ಲಿ ನಡೆಯಿತು.ಶ್ರೀ ಧೂಮಾವತಿ ದೈವಸ್ಥಾನದ ಆಡಳಿತ ಮೊಕ್ತೇಸರ, ಅಂತರ್ ರಾಷ್ಟ್ರೀಯ ಕ್ರೀಡಾ ಪಟು ಕೆ. ಶ್ರೀಧರ ಆಳ್ವ ಕಂದಾವರ ಬಾಳಿಕೆ ಕಾರ್ಯಕ್ರಮವನ್ನು ಶ್ರೀ ಧೂಮಾವತಿ ಪರಿವಾರ ದೈವಗಳನ್ನು ಪ್ರಾರ್ಥಿಸಿ ದೀಪ ಬೆಳಗಿಸಿ ಉದ್ಘಾಟಿಸಿದರು.
ನಂತರ ಮಾತನಾಡಿ ನಮ್ಮ ಹಿರಿಯರೆಲ್ಲ ದಿನದ ಬಹು ಸಮಯವನ್ನು ಜೇವನೋಪಾಯಕ್ಕಾಗಿ ಗದ್ದೆಯಲ್ಲೇ ಕಳೆದು ನಿರಂತರ ಕೆಸರಿನ ಸ್ಪರ್ಶ ದಿಂದ ಆರೋಗ್ಯ ವಂತರಾಗಿದ್ದರು. ಆದರೆ ಇಂದು ಆ ಪರಿಸ್ಥಿತಿ ಇಲ್ಲ ನಮ್ಮ ಕಂದಾವರದಲ್ಲಿ ಪ್ರಥಮವಾಗಿ ಕೆಸರ್ಡ್ ಒಂಜಿ ದಿನ ಕಾರ್ಯಕ್ರಮ ಆಯೋಜಿಸಿದ ಬೈಲ್ ಫ್ರೆಂಡ್ಸ್ ನ ಈ ಕಾರ್ಯಕ್ರಮ ಶ್ಲಾಘನೀಯ ಎಂದರು.
ಕಾರ್ಯಕ್ರಮ ದಲ್ಲಿ ಹಿರಿಯರಾದ ಮೂಡುಕರೆ ಗುತ್ತು ಕೊರಗ ಶೆಟ್ಟಿ, ನಾರಾಯಣ ಪೂಜಾರಿ ಬಂಟ ಸಾನ, ಬೈಲು ಮೇಗಿನ ಮನೆ ಮಹೇಶ್ ಹೆಗ್ಡೆ, ಬೈಲು ಮೇಗಿನ ಮನೆ ರವೀಂದ್ರ ಭಂಡಾರಿ, ಕಂದಾವರ ಪಂಚಾಯತ್ ಅಧ್ಯಕ್ಷೆ ಶಾಲಿನಿ ಶಶಿಕಾಂತ್, ಉಪಾಧ್ಯಕ್ಷ ಉದಯ ರಾವ್ ಪಂಚಾಯತ್ ಸದಸ್ಯ ಸಂಪತ್ ಪೂಜಾರಿ. ಬೈಲ್ ಫ್ರೆಂಡ್ಸ್ ನ ಅಧ್ಯಕ್ಷ ಚೇತನ್ ಮೂಡುಕರೆ, ಅದ್ಯಪಾಡಿ ಆಧಿನಾಥೆಶ್ವರ ದೇವಸ್ಥಾನದ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಬೈಲು ಏತ ಮೊಗರು ಗುತ್ತು ಸುಜಿತ್ ಆಳ್ವ, ಅದ್ಯಪಾಡಿ ಗುತ್ತು ರಾಜೀವ ಆಳ್ವ , ಕಂದಾವರ ಮೇಗಿನ ಮನೆ ಪ್ರಕಾಶ್ ಶೆಟ್ಟಿ, ವಾಲ್ಟರ್ ಕೌಡುರು, ಬಿಲ್ಲವ ಸಂಘ ಕಂದಾವರ ಇದರ ಅಧ್ಯಕ್ಷರಾದ ಸಂತೋಷ್ ಪೂಜಾರಿ, ಪೆರ್ಮಂಕಿ ಗುತ್ತು ಕಿರಣ್ ಪಕ್ಕಳ , ಸುಕೇಶ್ ಮಾನೈ , ಸೋಹನ್ ಅತಿಕಾರಿ, ಸಂಜೀವ ನಲಿಕೆ, ಬಾಲ ಕೃಷ್ಣ ಕಾವ, ಉಮೇಶ್ ಭಂಡಾರಿ, ದಿವಾಕರ ಶೆಟ್ಟಿ ಸುರೇಂದ್ರ ಶೇಣವ. ಸತೀಶ್ ಶೆಟ್ಟಿ ಅಶೋಕ್ ಪೂಜಾರಿ, ಕೃಷ್ಣಪ್ಪ ಪೂಜಾರಿ, ವಿಶ್ವನಾಥ್ ಕೋಟ್ಯಾನ್, ದಿನೇಶ್ ಕಂದಾವರ, ಮೋಹನ್ ಶೆಟ್ಟಿ, ಸುಧಾಕರ್ ಕೊಳಂಬೆ, ಶ್ರೀನಾಥ್ ಶೆಟ್ಟಿ, ತೆಂಜ ಬೈಲ್ ಫ್ರೆಂಡ್ಸ್ ನ ಉಪಾಧ್ಯಕ್ಷ ಪುನೀತ್.ಸಂತೋಷ್ ಆಚಾರ್ಯ ಸದಸ್ಯ ಹರೀಶ್ ಪೂಜಾರಿ ಅಶೋಕ್ ಸಾಲ್ಯಾನ್, ಬಾಲ ಕೃಷ್ಣ ಸಾಲ್ಯಾನ್ ಮುರಳಿ,ಮತ್ತಿತರರು ಉಪಸ್ಥಿತರಿದ್ದರು.
ಮಕ್ಕಳಿಗೆ ಮಹಿಳೆಯರಿಗೆ ಪುರುಷರಿಗೆ ಹಾಗೂ ಹಿರಿಯರಿಗೆ ಕೆಸರಿನ ಗದ್ದೆಯಲ್ಲಿ ಹಗ್ಗ ಜಗ್ಗಾಟ, ವಾಲಿ ಬಾಲ್,೧೦೦ಮೀಟರ್ ಓಟ, ಲಿಂಬೆ ಚಮಚ ಓಟ, ಮಡಲ್ ಹೆಣೆಯುವ ಸ್ಪರ್ಧೆ ಉಪ್ಪು ಮುಡಿ ಮುಂತಾದ ಸ್ಪರ್ಧೆಗಳನ್ನು ನಡೆಸಲಾಯಿತು ಸತೀಶ್ ಶೆಟ್ಟಿ ಕಂದಾವರ ಮತ್ತು ತೇಜಸ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು