ಎಸ್ ಡಿ ಎಮ್ ಮಂಗಳ ಜ್ಯೋತಿ ಐಟಿಐಗೆ ಶೇಕಡ ೯೫ ಫಲಿತಾಂಶ
ಕೈಕಂಬ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಂಗಳ ಜ್ಯೋತಿ ಕೈಗಾರಿಕಾ ತರಬೇತಿ ಸಂಸ್ಥೆ ( ಐಟಿಐ ) ವಾಮಂಜೂರು ಇಲ್ಲಿ ಕಳೆದ ಜುಲೈ ೨೦೨೩ರ ಸಾಲಿನಲ್ಲಿ ನಡೆದ ಅಖಿಲ ಭಾರತ ವೃತ್ತಿ ಪರೀಕ್ಷೆಯಲ್ಲಿ ಸೀವಿಂಗ್ ಟೆಕ್ನಾಲಜಿ ಮತ್ತು ಮಲ್ಟಿಮೀಡಿಯ ಅನಿಮೇಷನ್ ಅಂಡ್ ಸ್ಪೆಷಲ್ ಎಫೆಕ್ಟ್ ಘಟಕಗಳಲ್ಲಿ ಶೇಕಡ ೧೦೦ ಫಲಿತಾಂಶ ದಾಖಲಿಸಿದ್ದು , ಸಂಸ್ಥೆಗೆ ಒಟ್ಟು ಶೇಕಡ ೯೫ ಫಲಿತಾಂಶ ಬಂದಿದ್ದು ಪರೀಕ್ಷೆಗೆ ಹಾಜರಾದ ಒಟ್ಟು ೧೪೭ ತರಬೇತುದಾರರಲ್ಲಿ ೧೩೯ ತರಬೇತಿದಾರರು ತೇರ್ಗಡೆ ಹೊಂದಿರುತ್ತಾರೆ.
೫೨ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ ಹಾಗೂ ಉಳಿದ ಮಕ್ಕಳು ಉತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ ಎಂದು ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಸಂಸ್ಥೆಯ ಈ ಸಾಧನೆಗಾಗಿ ಎಸ್ ಡಿ ಎಮ್ ಸಂಸ್ಥೆಯ ಅದ್ಯಕ್ಷರಾದ ಶ್ರೀ ಡಿ ವೀರೇಂದ್ರ ಹೆಗ್ಗಡೆಯವರು ಮತ್ತು ಆಡಳಿತ ಮಂಡಳಿ ವಿದ್ಯಾರ್ಥಿಗಳನ್ನು ಪ್ರಾಧ್ಯಾಪಕ ವೃಂದದವರನ್ನು ಅಭಿನಂದಿಸಿರುತ್ತಾರೆ.