ಕಿಲೆಂಜಾರು – ಕುಳವೂರು ಬಂಟರ ಸಂಘದ ೧೦ನೇ ವರ್ಷದ ಬಂಟ ಸಮ್ಮಿಲನ ಕಾರ್ಯಕ್ರಮ
ಕೈಕಂಬ: ಕಿಲೆಂಜಾರು – ಕುಳವೂರು ಬಂಟರ ಸಂಘದ ೧೦ನೇ ವರ್ಷದ ಬಂಟ ಸಮ್ಮಿಲನಕೈಕಂಬ: ಮಂಗಳೂರು ತಾಲೂಕಿನ ಕಿಲೆಂಜಾರು – ಕುಳವೂರು ಬಂಟರ ಸಂಘದ ೧೦ನೇ ವರ್ಷದ ಬಂಟ ಸಮ್ಮಿಲನ ಕಾರ್ಯಕ್ರಮ ಮುತ್ತೂರಿನ ದಿನಕರ ಮೇ೦ಡರವರ ಮನೆಯಲ್ಲಿ ಶನಿವಾರ ನಡೆಯಿತು.

ಕಾರ್ಯಕ್ರಮವನ್ನು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಿ ಮಾತನಾಡಿದ ತುಳು ಚಲನಚಿತ್ರ ನಟ, ವಾಗ್ಮಿ ತಮ್ಮಣ್ಣ ಶೆಟ್ಟಿಯವರು ಬಂಟ ಸಮುದಾಯ ಆಧುನಿಕ ಜೀವನದಲ್ಲಿಯೂ ತಮ್ಮ ಹಿರಿಯರಿಂದ ಬಂದ ಸಂಪ್ರದಾಯ, ಆಚಾರ-ಅನುಸರಣೆಗಳನ್ನು ಇಂದಿಗೂ ಉಳಿಸಿಕೊಂಡು ಬಂದಿದೆ.ಬಂಟ ಸಮಾಜದ ಹುಟ್ಟು, ಮದುವೆ, ಸಾವು, ಮೂಲ ಜೀವನ ಪದ್ಧತಿ ಆಚರಣೆಯನ್ನು ಉಳಿಸಿ ಮುಂದಿನ ಪೀಳಿಗೆಗೆ ಮುಂದುವರಿಸಬೇಕಾದ ಅವಶ್ಯಕತೆ ಇದೆ. ಎಂದ ಅವರು ಈಗಿನ ಆಡಂಬರದ ಮದುವೆಯಿಂದಾಗುವ ಅನಾಹುತಗಳು, ತೊಂದರೆಗಳು, ಅತೀ ಸರಳ ದೈವಾರಾಧನೆ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು.

ಅಧ್ಯಕ್ಷತೆಯನ್ನು ಕಿಲೆಂಜಾರು-ಕುಳವೂರು ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಆಳ್ವ ಗುಂಡ್ಯ ವಹಿಸಿ ಮಾತನಾಡಿ ಸಂಘ ಕಳೆದ ೧೦ ವರ್ಷ ಗಳಲ್ಲಿ ಹಮ್ಮಿಕೊಂಡು ಬಂದ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು.ಗುರುಪುರ ಬಂಟರ ಮಾತೃ ಸಂಘ(ರಿ) ಇದರ ಅಧ್ಯಕ್ಷ ಸಂತೋಷ್ ಶೆಟ್ಟಿ ಹೊಸಲಕ್ಕೆ ಶೆಡೈ, ಕೃಷ್ಣರಾಜ್ ಮಾರ್ಲ ಮುತ್ತೂರು, ಸದಾನಂದ ಶೆಟ್ಟಿ ಕುಳವೂರು ಗುತ್ತು, ತಿಮ್ಮಪ್ಪ ಶೆಟ್ಟಿ ಅಗರಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮುತ್ತೂರು ಗ್ರಾಮ ಪಂಚಾಯತ್ ನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಪ್ರವೀಣ್ ಆಳ್ವ ಗುಂಡ್ಯ ಅವರನ್ನು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆ, ಸಮ್ಮಾನ ಪತ್ರ ನೀಡಿ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಕಿಲೆಂಜಾರು ಮತ್ತು ಕುಲವೂರಿನ ಬಂಟ ಭಾಂದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಶುಭಕರ ಶೆಟ್ಟಿ ಪಂಜ ಸ್ವಾಗತಿಸಿದರು. ಶಂಕರ ಶೆಟ್ಟಿ ದೋಣಿಕರಿಯ ವರದಿವಾಚಿಸಿದರು. ದಿನಕರ ಮೇ೦ಡ ನಿರೂಪಿಸಿ ವಂದಿಸಿದರು.