ಗೋವಿನತೋಟ: ಅಷ್ಟೋತ್ತರ ಶತ ಶ್ರೀಮದ್ಭಾಗವತ ಕಥಾ ಪಾರಾಯಣ ಸಪ್ತಾಹದ ಕಾರ್ಯಾಲಯ ಉದ್ಘಾಟನೆ ಮತ್ತು ವಿಜ್ಞಾಪನಾ ಪತ್ರ ಬಿಡುಗಡೆ
ಬಂಟ್ವಾಳ :ಸಮರ್ಪಣಭಾವದಿಂದ ಭಗವಂತ ಸ್ಮರಿಸಿದಾಗ ಪುಣ್ಯ ಪ್ರಾಪ್ತಿಯಾಗುತ್ತದೆ. ಧರ್ಮ, ರಾಷ್ಟ್ರ ,ಗೋಸೇವೆ ಯಿಂದ ನಮ್ಮ ಬದುಕನ್ನು ಪಾವನವಾಗುವುದು ಎಂದು ಶ್ರೀ ಭಕ್ತಿ ಭೋಷಣ್ ದಾಸ್ ಪ್ರಭುಜೀಯವರು ನುಡಿದರು.ಪುದುಗ್ರಾಮದ ಗೋವಿನತೋಟ ರಾಧಾ ಸುರಭಿ ಗೋ ಮಂದಿರ ರಾಷ್ಟ್ರೀಯ ಗೋ ಸೇವಾ ಸಂಸ್ಥಾನದಲ್ಲಿ ನವೆಂಬರ್ ತಿಂಗಳಲ್ಲಿ ನಡೆಯುವ ಅಷ್ಟೋತ್ತರ ಶತ ಶ್ರೀಮದ್ಭಾಗವತ ಕಥಾ ಪಾರಾಯಣ ಸಪ್ತಾಹ, ಮಹಾಯಜ್ಞ ಮತ್ತು ಗೋ ನವರಾತ್ರಿ ಉತ್ಸವದ ಕಾರ್ಯಾಲಯದ ಉದ್ಘಾಟನೆ ಮತ್ತು ವಿಜ್ಞಾಪನಾ ಪತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನಗೈದರು.

ಸಪ್ತಾಹ ಸಮಿತಿಯ ಅಧ್ಯಕ್ಷರಾದ ಕ್ಯಾಪ್ಟನ್ ಬ್ರಿಜಿಶ್ ಚೌಟ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿ,ಭಾರತ ಧರ್ಮಧಾರಿತ ದೇಶವಾಗಿ ಇಂದು ವಿಶ್ವದಲ್ಲಿ ಪ್ರಬಲ ಶಕ್ತಿಯಾಗಿ ಹೊರಹೊಮ್ಮಿದೆ, ನಾವೆಲ್ಲರೂ ಧರ್ಮದ ಕೆಲಸದಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಗೌರವ ಸಲಹೆಗಾರರಾದ ಶೋಭಾ ಮಯ್ಯ,ಗೌರವಧ್ಯಕ್ಷರಾದ ಐತಪ್ಪ ಆಳ್ವ ಸುಜೀರುಗುತ್ತು, ಕಾರ್ಯಧ್ಯಕ್ಷ ವಿಜಯ ಪ್ರಕಾಶ ಮಲ್ಪೆ, ಸಂಘಟನಾ ಕಾರ್ಯದರ್ಶಿ ಗಳಾದ ಪ್ರಸಾದ್ ಕುಮಾರ್ ರೈ ಬಿ.ಸಿ.ರೋಡ್, ರತ್ನಾಕರ ಶೆಟ್ಟಿ ಕಲ್ಲಡ್ಕ,,ಮಹಿಳಾ ಸಂಚಾಲಕರಾದ ಜಯಶ್ರೀ ಕರ್ಕೇರ, ನ್ಯಾಯವಾದಿ ರಮೇಶ ಉಪಾಧ್ಯಯ,ಪದ್ಮನಾಭ ಶೆಟ್ಟಿ ಪುಂಚಮೆ, ಕೋಶಾಧಿಕಾರಿ ವಸಂತಿ ಎಲ್ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಧ್ಯಕ್ಷರಾದ ಟಿ.ತಾರಾನಾಥ ಕೊಟ್ಟಾರಿ ಪ್ರಾಸ್ತವಿಸಿ, ಸ್ವಾಗತಿಸಿದರು, ಕಾರ್ಯದರ್ಶಿ ನವೀನ್ ವಂದಿಸಿದರು, ಪ್ರ. ಕಾರ್ಯದರ್ಶಿ ದಾಮೋದರ ನೆತ್ತರಕೆರೆ ಕಾರ್ಯಕ್ರಮ ನಿರೂಪಿಸಿದರು.