ಕುಲಾಲ ಸೇವಾದಳದ ಕೃಷ್ಣ ಕೃಷ್ಣ ಶ್ರೀಕೃಷ್ಣ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ
ಬಂಟ್ವಾಳ : ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘ ಇದರ ಆಶ್ರಯದಲ್ಲಿರುವ ಕುಲಾಲ ಸೇವಾದಳದ ವತಿಯಿಂದ ಕೃಷ್ಣ ಕೃಷ್ಣ ಶ್ರೀ ಕೃಷ್ಣಾ ಮಕ್ಕಳ ಕೃಷ್ಣ ವೇಷ ಸ್ಪರ್ಧೆಯ ಆಮಂತ್ರಣ ಪತ್ರಿಕೆಯ ಬಿಡುಗಡೆ ಕಾರ್ಯಕ್ರಮ ಶುಕ್ರವಾರ ಬಿ.ಸಿ.ರೋಡಿನ ರಕ್ತೇಶ್ವರಿ ದೇವಸ್ಥಾನದಲ್ಲಿ ನಡೆಯಿತು.

ಸಂಘದ ಅಧ್ಯಕ್ಷ ರಾಧಾಕೃಷ್ಣ ಬಂಟ್ವಾಳ ಬಿಡುಗಡೆ ಮಾಡಿ ಮಾತನಾಡಿ ಕುಲಾಲ ಸಮಾಜದ ಬಾಂಧವರಿಗೆ ಸೇವಾದಳದ ಮೂಲಕ ಉತ್ತಮ ಕಾರ್ಯಕ್ರಮಗಳು ಮೂಡಿಬರಲಿ ಎಂದು ಶುಭಹಾರೈಸಿದರು. ಇದೇ ಸಂದರ್ಭ ಸಮಾಜದ ಹಿರಿಯರಾದ ಕೃಷ್ಣಪ್ಪ ಸಾಲ್ಯಾನ್, ಕಾರ್ಯಕಾರಿ ಸಮಿತಿ ಸದಸ್ಯರಾದ ಮಚ್ಚೇಂದ್ರ ಸಾಲ್ಯಾನ್, ಕೋಶಾಧಿಕಾರಿ ರಮೇಶ್ ಸಾಲ್ಯಾನ್, ಮೀನಾಕ್ಷಿ ಪದ್ಮನಾಭ, ಗಣೇಶ್ ಮರ್ದೊಳಿ, ಕುಲಾಲ ಸೇವಾದಳದ ದಳಪತಿ ರಾಜೇಶ್ ಕುಮಾರ್, ಕಾರ್ಯದರ್ಶಿ ಜಯಂತ ಅಗ್ರಬೈಲು, ಸಾಂಸ್ಕೃತಿಕ ಕಾರ್ಯದರ್ಶಿಗಳಾದ ರಾಜೇಶ್ ಭಂಡಾರಿಬೆಟ್ಟು, ಗಣೇಶ್ ಕುಲಾಲ್ ಬೆದ್ರಗುಡ್ಡೆ, ಮಹಿಳಾ ಘಟಕದ ಅಧ್ಯಕ್ಷೆ ಮಾಲತಿ ಮಚ್ಚೇಂದ್ರ, ನಮಿತಾ ಉಮೇಶ್, ಸುಶೀಲಾ ಲಿಂಗಪ್ಪ, ಪ್ರೇಮಜನಾರ್ದನ, ರೂಪಾ, ವಾರಿಜಾ, ಆಶಾಗಿರಿಧರ್, ಪ್ರಭಾವತಿ, ನಳಿನಿರಮೇಶ್, ಪ್ರಭಾವತಿ ಉಪಸ್ಥಿತರಿದ್ದರು.