Published On: Sat, Aug 26th, 2023

ವಿಶ್ವ ಪವರ್ ಲಿಫ್ಟಿಂಗ್ ನಲ್ಲಿ ಆದರ್ಶ್ ಗೆ ಚಿನ್ನದ ಪದಕ

ಬಂಟ್ವಾಳ: ರೊಮೇನಿಯಾದ ಕ್ಲುಜ್ ನಲ್ಲಿ ನಡೆಯುತ್ತಿರುವ ವಿಶ್ವ ಜೂನಿಯರ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್-2023(equipped) ನ 59 ಕೆ.ಜಿ. ವಿಭಾಗದಲ್ಲಿ ಮಂಗಳೂರಿನ ಆದರ್ಶ್ ಬಿ ಅತ್ತಾವರ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. 

ಮಂಗಳೂರು ಅತ್ತಾವರ ನಿವಾಸಿ ಭರತ್ ಕುಮಾರ್ ಹಾಗೂ ಚಂದ್ರಾಕ್ಷಿ ದಂಪತಿ ಪುತ್ರರಾದ ಇವರು ಚೆನ್ನೈ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ(ICF) ನಲ್ಲಿ ಉದ್ಯೋಗಿಯಾಗಿದ್ದಾರೆ. 

2021-22ರಲ್ಲಿ ಟರ್ಕಿಯಲ್ಲಿ ನಡೆದ ಏಷಿಯನ್ ಹಾಗೂ ವರ್ಲ್ಡ್‌ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿಯೂ ಚಿನ್ನದ ಪದಕ ಜಯಿಸಿದ್ದರು. ಇವರು ಏಕಲವ್ಯ ಪ್ರಶಸ್ತಿ ಪುರಸ್ಕೃತ ಸತೀಶ್ ಕುಮಾರ್ ಕುದ್ರೋಳಿ ಅವರಿಂದ ಬಾಲಾಂಜನೇಯ ವ್ಯಾಯಾಮ ಶಾಲೆಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter