ಮಜಿ ಶಾಲೆಗೆ ಜೇಸಿಐಯಿಂದ ಪ್ಯಾನೆಲ್ ಬೋಡ್೯ ವಿತರಣೆ
ಬಂಟ್ವಾಳ: ಶೈಕ್ಷಣಿಕ ಸಂಸ್ಥೆಗಳ ಭೌತಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ಸಂಘಟನೆಗಳು, ಸಂಘಸಂಸ್ಥೆಗಳ ಸಹಕಾರ ಮುಖ್ಯ ಪಾತ್ರ ವಹಿಸುತ್ತದೆ, ಶಾಲೆಗೆ ತರಗತಿ ಕೋಣೆಗಳು ಇದರ ಮೂಲ ಮೆಟ್ಟಿಲುಗಳಾಗಿವೆ ಎಂದು ಜೇಸಿಐ ವಲಯಾಧ್ಯಕ್ಷರಾದ ಜೇ ಎಫ್ ಡಿ ಪುರುಷೋತ್ತಮ ಶೆಟ್ಟಿ ಯವರು ಹೇಳಿದ್ದಾರೆ.
ಬಂಟ್ವಾಳ ತಾಲೂಕಿನ ವೀರಕಂಭ ಗ್ರಾಮದ ಮಜಿ ದ.ಕ.ಜಿ.ಪಂ.ಹಿ.ಪ್ರಾ.ಶಾಲೆ.ಮಜಿಯಲ್ಲಿ ತರಗತಿ ಕೋಣೆಗಳಿಗೆ ಬಂಟ್ವಾಳ ಜೇಸಿಐ ವತಿಯಿಂದ ಕೊಡುಗೆಯಾಗಿ ನೀಡಿದ ಪ್ಯಾನೆಲ್ ಬೋಡ್೯ ವಿತರಿಸಿ ಅವರು ಮಾತಾಡಿದರು.
ಬಂಟ್ವಾಳ ಜೆಸಿಐ ಅಧ್ಯಕ್ಷ ಜೇಸಿ ರಾಜೇಂದ್ರ , ಜೇಸಿಐ ವಲಯ ಉಪಾಧ್ಯಕ್ಷರಾದ ಜೆ ಎಫ್ ಡಿ ಅಜಿತ್ ಕುಮಾರ್ ಕೆ, ಜೇಸಿ ಕಾರ್ತಿಕ್, ಜೇಸಿ ರೋಶನ್ ರೈ , ಜೇಸಿ ಕಾರ್ಯದರ್ಶಿ ರಶ್ಮಿ ಶೆಟ್ಟಿ, ಶಾಲಾ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ವಿಜಯ ಶೇಖರ್ ಮೊದಲಾದವರು ಉಪಸ್ಥಿತರಿದ್ದರು.
ಶಾಲಾ ಮುಖ್ಯ ಮುಖ್ಯ ಶಿಕ್ಷಕಿ ಬೆನಡಿಕ್ಟಾ ಆಗ್ನೇಸ್ ಮಂಡೋನ್ಸಾ ಸ್ವಾಗತಿಸಿ, ಸಹ ಶಿಕ್ಷಕಿ ಸಂಗೀತ ಶರ್ಮ ಪಿ.ಜಿ ವಂದಿಸಿದರು.