ಒಡ್ಡೂರಿನಲ್ಲಿ ಕಾರ್ಯಗತಗೊಂಡ ಮೊದಲ ಬಯೋಸಿಎನ್‌ಜಿ ಘಟಕ ಶೀಘ್ರದಲ್ಲೇ ಲೋಕಾರ್ಪಣೆ
ಕೈಕಂಬ:” ಕಸದಿಂದ ರಸ ತೆಗೆಯಬಹುದು” ಎಂಬ ಮಾತು ಕೇಳಿದ್ದೆವೆ. ಇದು ಅಕ್ಷರಶ: ಪಾಲನೆಯಾಗುತ್ತಿರುವುದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರ ಗಂಜಿಮಠದಲ್ಲಿರುವ ಒಡ್ಡೂರು ಫಾಮ್೯ ನಲ್ಲಿ …ಇದೀಗ ರಾಜ್ಯದಲ್ಲಿಯೇ ಮೊದಲ ಬಾರಿಗೆ ಶಾಸಕ ರಾಜೇಶ್ ನಾಯ್ಕ್ ಅವರ ಒಡ್ಡೂರುಫಾಮ್೯ನಲ್ಲಿ “ಸಂಕುಚಿತ ನೈಸರ್ಗಿಕ ಅನಿಲ” ಘಟಕ( ಬಯೋ ಸಿಎನ್‌ಜಿ ಪ್ಲಾಂಟ್)ಕಾರ್ಯಗತಗೊಂಡಿದೆ.
ಸುಮಾರು 3 ಕೋ.ರೂ.ವೆಚ್ಚದಲ್ಲಿ ಈ ಘಟಕ ಅನುಷ್ಠಾನಗೊಂಡಿದ್ದು, ಶೀಘ್ರವೇ ಇದರ ಲೋಕಾರ್ಪಣೆಯು ಆಗಲಿದೆ. ಶಾಸಕ ರಾಜೇಶ್ ನಾಯ್ಕ್ ಅವರ ಮಾರ್ಗದರ್ಶನದಲ್ಲಿ ಇವರ ಪುತ್ರ ಉನ್ನತ್ ಆರ್. ನಾಯ್ಕ್ ಅವರು ಈ ಘಟಕದ ಉಸ್ತುವಾರಿ ನೋಡಿಕೊಳ್ಳಲಿದ್ದು ರೀಟ್ಯಾಪ್ ಸೋಲುಷನ್ ಸಂಸ್ಥೆ ಇದರ ಪೂರ್ತಿ ನಿರ್ವಹಣೆ ಮಾಡಲಿದೆ.
ಸುಮಾರು 60 ಸೆಂಟ್ಸ್ ಜಮೀನಿನಲ್ಲಿ ಈ ಘಟಕ ಸುಸಜ್ಜಿತ ಹಾಗೂ ವೈಜ್ಞಾನಿಕವಾಗಿ ನಿರ್ಮಾಣಗೊಂಡಿದ್ದು, ಈಗಾಗಲೇ ಪ್ರಾಯೋಗಿಕವಾಗಿ ಸಾವಯವ ಗೊಬ್ಬರ ಮತ್ತು ಅನಿಲ ಉತ್ಪಾದನೆಯು ಆರಂಭಗೊಂಡಿದೆ.
ಸದ್ಯಕ್ಕೆ ನಗರ ಮತ್ತು ಗ್ರಾಮೀಣ ಸ್ಥಳೀಯಾಡಳಿತ ಸಂಸ್ಥೆಗಳ ಹಸಿ ತ್ಯಾಜ್ಯವನ್ನು ಬಳಸಿಕೊಂಡು ಸಾವಯವ ಗೊಬ್ಬರ ಮತ್ತು ಅನಿಲ ಉತ್ಪಾದನೆ ಮಾಡಲಾಗುತ್ತಿದ್ದು,ಇದರ ಮಾರಾಟಕ್ಕಾಗಿ ಪೆಸೊ( ಪೆಟ್ರೋಲಿಯಂ ಮತ್ತು ಸ್ಪೋಟಕ ರಕ್ಷಣಾ ಸಂಸ್ಥೆ) ವಿನ ಪರವಾನಿಗೆಗಾಗಿ ಕಾಯಲಾಗುತ್ತಿದೆ.
ಸುಮಾರು 8.50 ಲಕ್ಷ ಲೀ.ಮೀಥೇನ್ ಗ್ಯಾಸ್ ಟ್ಯಾಂಕ್ ಸಾಮಥ್ಯ೯ವನ್ನು ಹೊಂದಿದ್ದು, ದಿನವೊಂದಕ್ಕೆ 500 ರಿಂದ 600 ಕೆ.ಜಿ.ಅನಿಲ ಉತ್ಪಾದನೆಯಾಗುುತ್ತಿದೆ. ಅದೇರೀತಿ 10 ಟನ್ ಹಸಿಕಸದಿಂದ ಅಷ್ಠೆ ಪ್ರಮಾಣದ ಉತ್ಕೃಷ್ಟವಾದ ಗೊಬ್ಬರವು ಲಭ್ಯವಾಗುತ್ತದೆ. ಅನಿಲವನ್ನು ಅಡುಗೆ, ವಾಹನ,ಇನ್ನಿತರ ವಾಣಿಜ್ಯ ಉದ್ದೇಶಕ್ಕೆ ಬಳಸಬಹುದಾಗಿದೆ ಎಂದು ಶಾಸಕ ರಾಜೇಶ್ ನಾಯ್ಕ್ ಅವರು ಗುರುವಾರ ಘಟಕಕ್ಕೆ ಭೇಟಿ ನೀಡಿದ ಸಂದರ್ಭ ಸುದ್ದಿ9ಗೆ ಮಾಹಿತಿ ನೀಡಿದರು.
ಘಟಕಕ್ಕೆ ಸುಮಾರು1 ಲಕ್ಷ ಲೀ.ನೀರಿನ ಅವಶ್ಯಕತೆ ಇದ್ದು, ಇದನ್ನು ಕೂಡ ಎರಡು ಕಿ.ಮೀ.ದೂರದಲ್ಲಿರುವ ಕೋಳಿ ಅಂಗಡಿಗಳ ಸಹಿತ ಪಕ್ಕದ ಪ್ಯಾಕ್ಟರಿಯೊಂದರ ತ್ಯಾಜ್ಯ ನೀರನ್ನೇ ಬಳಸಲಾಗುತ್ತದ್ದು, ಪೈಪ್ ಲೈನ್ ಮೂಲಕವೇ ಘಟಕಕ್ಕೆ ಪೂರೈಕೆಯಾಗುತ್ತದೆ. ಬಳಿಕ ಸಂಸ್ಕರಿಸಿದ ಈ ನೀರನ್ನು ತೋಟಕ್ಕೆ ಬಳಸಲಾಗುತ್ತದೆ. ಇದರಿಂದಾಗಿ ಪರಿಸರ ಪೂರ್ತಿ ಹಚ್ಚ ಹಸಿರಾಗಿಯೇ (ಗ್ರೀನ್ ಲ್ಯಾಂಡ್) ಉಳಿಯುತ್ತದೆ.
ಗುಜರಾತ್ ಮೊಡಲ್:
ಬಂಟ್ವಾಳ ಪುರಸಭೆಯ ತ್ಯಾಜ್ಯ ವಿಲೇವಾರಿ ಸಮಸ್ಯೆ ಇದೀಗ ಬಯೋಸಿಎನ್‌ಜಿ ಘಟಕವನ್ನು ಕಾರ್ಯರೂಪಕ್ಕೆ ತರುವಂತಾಗಿದೆ.ಪುರಸಭೆಯ ಹಸಿಕಸವನ್ನು ಇಲ್ಲಿ ಬಳಸಲಾಗುತ್ತದೆ.
ತರಕಾರಿ ಸಹಿತ ಪೂರ್ತಿ ಹಸಿಕಸವನ್ನು ಮಾತ್ರ ಇಲ್ಲಿ ಬಳಸಲಾಗುತ್ತಿದೆ.ರೀಟ್ಯಾಪ್ ಸೋಲುಷನ್ ಸಂಸ್ಥೆಯ 6 ಮಂದಿ ಸಿಬ್ಬಂದಿಗಳು ಖಾಯಂ ಇದ್ದು,ಕಾರ್ಯನಿರ್ವಹಿಸುತ್ತಾರೆ.ಹಾಗಯೇ ಮೂರು ಮಂದಿ ನಮ್ಮನೌಕರರು ಹಸಿ ಮತ್ತು ಒಣಕಸ ಪ್ರತ್ಯೇಕಿಸುವಲ್ಲಿ ತೊಡಗಿಸಿಕೊಳ್ಳುತ್ತಾರೆ
ಎಂದರು.
ಗುಜರಾತ್ ನಲ್ಲಿ ಇಂತಹ ಘಟಕಗಳು ಕಾರ್ಯಾಚರಿಸುತ್ತಿದ್ದು,ತನ್ನ ಪತ್ರ ಉನ್ನತ್ ಆರ್.ನಾಯ್ಕ್ ಇದರ ಬಗ್ಗೆ ಅಧ್ಯಯನ ನಡೆಸಿ ಅತನೇ ಪೂರ್ತಿ ಜವಬ್ದಾರಿಯನ್ನು
ವಹಿಸಿ “ಒಡ್ಡೂರು ಎನರ್ಜಿ” ಹೆಸರಿನಲ್ಲಿ ಬಯೋಸಿಎನ್‌ಜಿ ಘಟಕವನ್ನು ಆರಂಭಿಸಿದ್ದು,ಯಶಸ್ಸಿನತ್ತ ಸಾಗುತ್ತಿದ್ದಾನೆ ಎಂದು ಶಾಸಕ ರಾಜೇಶ್ ನಾಯ್ಕ್ ತಿಳಿಸಿದರು.
ಗ್ರಾ.ಪಂ.ಗಳು ಆಸಕ್ತಿ ವಹಿಸಬೇಕು
ರಾಜ್ಯದಲ್ಲಿಯೇ ಮೊದಲ ಬಾರಿಗೆ ಬಯೋಸಿಎನ್‌ಜಿ ಒಡ್ಡೂರಿನಲ್ಲಿ ಅನುಷ್ಠಾನಕ್ಕೆ ಬರುತ್ತಿದ್ದು,ಇದರ ಲೋಕಾರ್ಪಣೆಗೆ ಕೇಂದ್ರ,ರಾಜ್ಯ ಪರಿಸರ ಸಚಿವರನ್ನು ಆಹ್ವಾನಿಸಲಾಗುವುದು,ಪ್ರತಿ ಗ್ರಾ.ಪಂ.ಅಥವಾ ಅಕ್ಕಪಕ್ಕದ ಮೂರ್ನಾಲ್ಕು ಗ್ರಾ.ಪಂ.ಒಟ್ಟು ಸೇರಿಕೊಂಡು ಹಾಗೆಯೇ
ನಗರಪಾಲಿಕೆ,ಪುರಸಭೆಗಳು ಇಂತಹ ಘಟಕವನ್ನು ಸ್ಥಾಪಿಸಲು ಆಸಕ್ತಿ ವಹಿಸಿದರೆ ತ್ಯಾಜ್ಯ ವಿಲೇವಾರಿಯ ಬಹುದೊಡ್ಡ ಸಮಸ್ಯೆ ಬಗೆಹರಿಯಲಿದೆಯಲ್ಲದೆ ಆದಾಯವು ಬರಲಿದೆ ಎಂದು ಅವರು ಸಲಹೆ ನೀಡಿದರಲ್ಲದೆ ಸರಕಾರವು ಈ ನಿಟ್ಟಿನಲ್ಲಿ ಪ್ರೋತ್ಸಾಹ ನೀಡಬೇಕು ಎಂದರು.
ಯಾರಾದರೂ ಕೃಷಿಕರಿಗೆ ಸಾವಯವ ಗೊಬ್ಬರದ ಅವಶ್ಯಕತೆ ಇದ್ದಲ್ಲಿ ಆ ರೈತನ ತೋಟದ ಮಣ್ಣನ್ನು ಇಲ್ಲಿಯೇ ಪರೀಕ್ಷಿಸಿ ಆ ಮಣ್ಣಿಗೆನುಗುಣವಾದ ಸತ್ವದ ಗೊಬ್ಬರವನ್ನು ತಯಾರಿಸಿ ನೀಡುವಂತ ಚಿಂತನೆಯು ಇದೆ ಎಂದು ಶಾಸಕರಾಜೇಶ್ ನಾಯ್ಕ್ ತಿಳಿಸಿದ್ದಾರೆ.
ಈಸಂದರ್ಭ ರೀಟ್ಯಾಪ್ ಸೋಲುಷನ್ ಸಂಸ್ಥೆಯ ಮಂಜುನಾಥ್ ಪೂರಕ ಮಾಹಿತಿ ನೀಡಿದರು.
ಘಟಕದ ಮುಖ್ಯಸ್ಥ ಉನ್ನತ್ ಆರ್ ನಾಯ್ಕ್, ಪ್ರಮುಖರಾದ ದೇವದಾಸ ಶೆಟ್ಟಿ ಬಂಟ್ವಾಳ, ಸುದರ್ಶನ್ ಬಜ,ಪುರುಷೋತ್ತಮ ಶೆಟ್ಟಿ ವಾಮದಪದವು, ಗಣೇಶ್ ರೈ ಮಾಣಿ,ನಂದರಾಮ ರೈ,ಚರಣ್ ಜುಮಾದಿಗುಡ್ಡೆ ಮೊದಲಾದವರಿದ್ದರು.