ದೇವಾಡಿಗ ಸಮಾಜದಿಂದ ಪೊಳಲಿ ತಾಯಿಗೆ 2 ಲಕ್ಷ 4 ಸಾವಿರ ರೂಪಾಯಿ ಮೌಲ್ಯದ ಸ್ವರ್ಣ ಪುಷ್ಪ ಹಾರ ಸಮರ್ಪಣೆ
ಕೈಕಂಬ: ದೇವಾಡಿಗ ಸಮಾಜ ಶ್ರೀ ಪೊಳಲಿ ಷಷ್ಠಿ ರಥ ಸಮರ್ಪಣಾ ಸಮಿತಿಯ ವತಿಯಿಂದ ಸಾವಿರ ಸೀಮೆ ಒಡತಿ ಪೊಳಲಿ ಶ್ರೀ ರಾಜರಾಜೇಶ್ವರಿ ಅಮ್ಮನವರಿಗೆ 2 ಲಕ್ಷ 4 ಸಾವಿರ ರೂಪಾಯಿ ಮೌಲ್ಯದ ಸ್ವರ್ಣ ಪುಷ್ಪ ಹಾರ ಮತ್ತು ಶ್ರೀ ಪೊಳಲಿ ಷಷ್ಠಿ ರಥಕ್ಕೆ ಸುಮಾರು 1 ಲಕ್ಷ ರೂಪಾಯಿ ಮೌಲ್ಯದ ಗಾಜಿನ ಪಲಕದ ಬಾಗಿಲನ್ನು, ಹೂವಿನ ಪೂಜೆ,ಸೀರೆ,ಫಲ ಪುಷ್ಪದೊಂದಿಗೆ ಸಮರ್ಪಣೆ ಮಾಡಲಾಯಿತು.
ದೇವಳದ ಅರ್ಚಕ ಅನಂತ್ ಭಟ್ ಪೂಜೆ ನೆರವೇರಿಸಿ ಪ್ರಸಾದ ನೀಡಿದರು. ಈ ಸಂದರ್ಭದಲ್ಲಿ ದೇವಾಡಿಗ ಸಮಾಜ ಶ್ರೀ ಪೊಳಲಿ ಷಷ್ಠಿ ರಥ ಸಮರ್ಪಣಾ ಸಮಿತಿಯ ಅಧ್ಯಕ್ಷ ಕೃಷ್ಣಪ್ಪ ದೇವಾಡಿಗ,ಪ್ರಧಾನ ಕಾರ್ಯದರ್ಶಿ ಶಮಿತ್ ದೇವಾಡಿಗ ಪೊಳಲಿ,ಉಪಾಧ್ಯಕ್ಷೆ ಚಂದ್ರಾವತಿ ದೇವಾಡಿಗ ಪೊಳಲಿ, ವಿಧ್ಯಾ ದೇವಾಡಿಗ ಪೊಳಲಿ, ಗೌರವ ಸಲಹೆಗಾರರಾದ ಡಾ.ಸುಂದರ ಮೊಯ್ಲಿ, ರಾಮದಾಸ್ ಬಂಟ್ವಾಳ, ಪ್ರವೀಣ್ ಬಿ ತುಂಬೆ,ನಾಗೇಶ್ ದೇವಾಡಿಗ ,ಸ್ವತಿಕ್ ಪೊಳಲಿ, ಪದ್ಮನಾಭ ದೇವಾಡಿಗ ಬಂಟ್ವಾಳ, ಸುಕುಮಾರ್ ದೇವಾಡಿಗ ಎಡಪದವು, ಕರುಣಾಕರ್ ಎಂ ಹೆಚ್,ರೋಹಿತ್ ಮರೋಳಿ, ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.