ಕೆಂಜಾರ್ ಗಾಂದೊಟ್ಯ ಕುಕ್ಯಾನ್ ಕುಟುಂಬಿಕರ ನಾಗಬನದಲ್ಲಿ ನಾಗತಂಬಿಲ
ಕೈಕಂಬ: ಕೆಂಜಾರ್ ಗಾಂದೊಟ್ಯ ಕುಕ್ಯಾನ್ ಕುಟುಂಬಿಕರ ನಾಗಬನದಲ್ಲಿ ಸೋಮವಾರ ನಾಗರಪಂಚಮಿಯ ಪ್ರಯುಕ್ತ ನಾಗದೇವರ ಬಣವನ್ನು ಹೂ ಹಿಂಗಾರದಲ್ಲಿ ಸಿಂಗರಿಸಿ ಹಾಲಾಭಿಷೇಕ, ಸಿಯಾಳಾಬಿಷೇಕ, ನಾಗತಂಬಿಲ ಪೂಜಾ ವಿಧಿವಿಧಾನಗಳು ಸೀತಾರಾಮ ಶಾಂತಿ ಅವರ ನೇತೃತ್ವದಲ್ಲಿ ಬಹಳ ವಿಜೃಂಭಣೆಯಿಂದ ನಡೆಯಿತು.

ಕುಟುಂಬದ ಹಿರಿಯ ಯಜಮಾನರಾದ ದೊಡ್ಡಯ್ಯ ಪೂಜಾರಿ ಬ್ರಹ್ಮಾರ್ಪಣೆ ಸಮರ್ಪಣೆಯೊಂದಿಗೆ, ಗಾಂದೊಟ್ಯ ಕುಟುಂಬದ ಅಧ್ಯಕ್ಷ ಪದ್ಮನಾಭ ಪೂಜಾರಿ, ಕಾರ್ಯದರ್ಶಿ ತಾರನಾಥ ಪೂಜಾರಿ, ನವೀನ್ ಪೂಜಾರಿ, ಮೋಹನಪೂಜಾರಿ, ಶ್ರೀಧರ ಪೂಜಾರಿ ಹಾಗೂ ಕುಕ್ಯಾನ್ ಕುಟುಂಬಿಕರು ತಂಬಿಲ ಪ್ರಸಾದ ಸ್ವೀಕರಿಸಿದರು. ನಂತರ ಅನ್ನಪ್ರಸಾದ ನಡೆಯಿತು.



