ಶ್ರೀ ಕಾಲಭೈರವ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಸಮಾಲೋಚನಾ ಸಭೆ
ಕೈಕಂಬ: ಮಂಗಳೂರು ತಾಲೂಕಿನ ಮಳಲಿ ಮಟ್ಟಿಯ ಪುರಾಣ ಪ್ರಸಿದ್ಧವಾದ ಜೋಗಿ ಮಠ ಶ್ರೀ ಕಾಲಭೈರವ ಮಂಜುನಾಥೇಶ್ವರ ದೇವಸ್ಥಾನದಲ್ಲಿ ನಡೆಯಲಿರುವ ಜೀರ್ಣೋದ್ಧಾರ ಪ್ರಯುಕ್ತ ಭಾನುವಾರ ದೇವಸ್ಥಾನದಲ್ಲಿ ಭಕ್ತಾಭಿಮಾನಿಗಳ ಸಮಾಲೋಚನಾ ಸಭೆ ನಡೆಯಿತು.

ಸಭೆಯನ್ನು ದೀಪ ಬೆಳಗಿಸ ಕದ್ರಿ ಜೋಗಿ ಮಠದ ಶ್ರೀ ವಿಠಲದಾಸ್ ತಂತ್ರಿಗಳು ಸಭೆಯನ್ನು ಉದ್ಘಾಟಿಸಿದರು. ಪ್ರತಿ ೧೨ ವರ್ಷಕ್ಕೊಮ್ಮೆ, ಕ್ಷೇತ್ರದ ಸಾನಿದ್ಯಾ ವೃದ್ಧಿಗಾಗಿ ಪುನರ್ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ನಡೆಸಬೇಕಾಗುತ್ತದೆ. ಇಲ್ಲಿ ದೇವರ ಸಾನಿಧ್ಯ ಮತ್ತು ದೈವಗಳ ಸಾನಿಧ್ಯ ಜೀರ್ಣೋದ್ದಾರದ ಜತೆಯಲ್ಲಿ ಕೆರೆ ಅಭಿವೃದ್ಧಿ ನಡೆಯಲಿದೆ. ಇದಕ್ಕೆ ಅಂದಾಜು ೧.೫ ಕೋಟಿ ಖರ್ಚಾಗಳಿದ್ದು, ಭಕ್ತರು ಒಂದಾಗಿ ಕೈಜೋಡಿಸಿದರೆ ಕಾರ್ಯ ಸುಗಮವಾಗಲಿದೆ ಎಂದರು.

ಸAಸದ ನಳಿನ್ ಕುಮಾರ್ ಕಟೀಲು, ಶಾಸಕರಾದ ಭರತ್ ಶೆಟ್ಟಿ, ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ಉಮಾನಾಥ ಕೋಟ್ಯಾನ್, ಮಾಜಿ ಸಚಿವ ರಮಾನಾಥ ರೈ , ಗಂಗಾಧರ್ ಜೋಗಿ ಮತ್ತು ಗಣನಾಥ ಭಂಡಾರಿಯವರ ಗೌರವಾಧ್ಯಕ್ಷತೆಯ, ಶೇಖರ ಜೋಗಿ ಅಧ್ಯಕ್ಷತೆಯ, ಚಂದ್ರಹಾಸ್ ಶೆಟ್ಟಿ ನಾರಳ, ಕಿರಣ್ ಪಕ್ಕಳ ಪೆರ್ಮoಕಿ ಗುತ್ತು, ದೀಕ್ಷಿತ್ ರೈ ಮಳಲಿ ಮತ್ತು ಮಹಿಳಾ ಸಮಿತಿ ಹಾಗೂ ಮೊಗರು, ತೆಂಕುಳಿಪಾಡಿ ಮತ್ತು ಬಡಗುಳಿಪಾಡಿ ಗ್ರಾಮಗಳ ಭಕ್ತರ ಜೀರ್ಣೋದ್ದಾರ ಸಮಿತಿಯನ್ನು ರಚಿಸಯಿತು.

ಪ್ರಾಸ್ತಾವಿಕವಾಗಿ ಮಾತನಾಡಿದ ಧಾರ್ಮಿಕ ಮುಂದಾಳು ಕಿರಣ್ ಪಕ್ಕಳ ಪೆರ್ಮಂಕಿ ಗುತ್ತು ಅವರು ಜೀರ್ಣೋದ್ದಾರ ಕಾರ್ಯದ ಬಗ್ಗೆ ಮಾಹಿತಿ ನೀಡಿ ಆ.೩೦ ರಂದು ಜೀರ್ಣೋದ್ಧಾರ ಕಾರ್ಯಗಳಿಗೆ ಶಿಲಾನ್ಯಾಸ ನೆರವೇರಿಸಲು ಹಾಗೂ ಮುಂದಿನ ವರ್ಷ ಫೆಬ್ರವರಿಯಲ್ಲಿ ೨೧ರಂದು ನಡೆಯಲಿರುವ ಅಷ್ಟಬಂಧ ಪುನರ್ ಬ್ರಹ್ಮಕಲಶೋತ್ಸವದ ಬಗ್ಗೆ ವಿವರಿಸಿದರು. ದೇವಸ್ಥಾನದ ಆಡಳಿತ ಮೊಕ್ತೇಸರ ಗಂಗಾಧರ ಜೋಗಿ ಮಾತನಾಡಿದರು.
ಕದ್ರಿ ಜೋಗಿ ಮಠದ ಪ್ರಧಾನ ಅರ್ಚಕ ಉಮೇಶ್‌ನಾಥ್ ಕದ್ರಿ, ಗೌರವ ಸಲಹೆಗಾರ ಶೇಖರ ಜೋಗಿ, ವಿಶ್ವನಾಥ ಪೂಜಾರಿ, ಶಿಕ್ಷಕ ಜಯಂತ ಆಚಾರ್ಯ, ಮಳಲಿ ಬಿಲ್ಲವ ಸಂಘದ ಅಧ್ಯಕ್ಷ ಕೇಶವ ಪೂಜಾರಿ ಮೆಸ್ಕಾಂ, ಕಾಜಿಲ ಮಾರಪ್ಪ ಶೆಟ್ಟಿ, ಶಿಕ್ಷಕ ಜಯಕರ ಶೆಟ್ಟಿ, ಕಂದಾವರ ಭರತ್ ಕರ್ಕೇರ, ಅರ್ಚಕ ಯೋಗೀಶ್, ಹರೀಶ್ ಮಟ್ಟಿ, ದಿನೇಶ್ ಶೆಟ್ಟಿ, ಮೋಹನ್ ಜೋಗಿ, ಗಂಜಿಮಠ ಪಂಚಾಯತ್ ಮಾಜಿ ಅಧ್ಯಕ್ಷ ನೋಣಯ್ಯ ಕೋಟ್ಯಾನ್, ನಾಗೇಶ್ ಜೋಗಿ, ಮಾಜಿ ತಾ.ಪಂ. ಸದಸ್ಯ ಸುನಿಲ್ ಪೂಜಾರಿ ಗಂಜಿಮಠ, ಬೂಬ ಪೂಜಾರಿ, ವಿನಯ್ ಪೂಜಾರಿ ಮಟ್ಟಿ ಮೇಗಿನಮನೆ, ದಯಾನಂದ ಪೂಜಾರಿ, ದಿವಾಕರ, ವಿದ್ಯಾ ಜೋಗಿ, ಲಕ್ಷ್ಮಿಕಾಂತ, ಗಂಗಾಧರ ಜೋಗಿ, ಅಜಯ್ ಜೋಗಿ, ಮಮತಾ ಕುಂದರ್, ಹರೀಶ್ ಜೋಗಿ, ದೀಕ್ಷಿತ್ ರೈ ಮಳಲಿ, ನಿಧಿ ಮಳಲಿ ಮತ್ತಿತರರು ಉಪಸ್ಥಿತರಿದ್ದರು. ಸ್ವಸ್ತಿ, ಉಜ್ವಲ ಮತ್ತು ರಕ್ಷಿತಾ ಪ್ರಾರ್ಥನೆ ನಡೆಸಿಕೊಟ್ಟರು. ಹರೀಶ್ ಮಟ್ಟಿ ಸ್ವಾಗತಿಸಿದರು. ಸತೀಶ್ ಶೆಟ್ಟಿ ಕಂದಾವರ ನಿರೂಪಿಸಿ, ವಂದಿಸಿದರು.