ಗಂಜಿಮಠ ಶಾಲೆಯಲ್ಲಿ ಸರ್ಕಾರದ
ಮೊಟ್ಟೆ, ಚಿಕ್ಕಿ ಯೋಜನೆಗೆ ಚಾಲನೆ
ಕೈಕಂಬ : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉರ್ದು ಹಿರಿಯ ಪ್ರಾಥಮಿಕ ಶಾಲೆ ಮತ್ತು ಉರ್ದು ಆಂಗ್ಲ ಮಾಧ್ಯಮ ಶಾಲೆ ಗಂಜಿಮಠ ಇಲ್ಲಿ ಆ. ೧೯ರಂದು ಶಾಲಾ ಮಕ್ಕಳಿಗೆ ಮೊಟ್ಟೆ ಹಾಗೂ ಚಿಕ್ಕಿ ವಿತರಿಸಿ ಸರ್ಕಾರದ ಯೋಜನೆಗೆ ಚಾಲನೆ ನೀಡಲಾಯಿತು.

ಶಾಲೆಯಲ್ಲಿ ಯೋಜನೆ ಉದ್ಘಾಟಿಸಿದ ಗಂಜಿಮಠ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲತಿ ಮಾತನಾಡಿ, ಶಾಲಾ ಮಕ್ಕಳ ಅಪೌಷ್ಟಿಕತೆ ಹೋಗಲಾಡಿಸಲು ಸರ್ಕಾರ ಮೊಟ್ಟೆಯಂತಹ ಪೌಷ್ಠಿಕ ಆಹಾರ ಯೋಜನೆ ಆರಂಭಿಸಿದೆ. ಊಟದ ಜೊತೆಗೆ ಮೊಟ್ಟೆ ಉತ್ತಮ ಆಹಾರ. `ವಿದ್ಯಾರ್ಥಿ ಸ್ನೇಹಿ’ ಯೋಜನೆಗಳು ಆರಂಭಗೊಂಡ ಬಳಿಕ ಗ್ರಾಮೀಣ ಪ್ರದೇಶಗಳ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗಿದೆ ಎಂದರು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ಮಾಜಿ ಸದಸ್ಯ ಸುನಿಲ್ ಪೂಜಾರಿ ಗಂಜಿಮಠ, ಪಂಚಾಯತ್ ಸದಸ್ಯ ಸುನಿಲ್ ಫೆರ್ನಾಂಡಿಸ್, ಉರ್ದು ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ರಿಯಾಝ್ ಗಂಜಿಮಠ, ಆಂಗ್ಲ ಮಾಧ್ಯಮ ಶಾಲಾ ಎಸ್‌ಡಿಎಂಸಿ ಉಪಾಧ್ಯಕ್ಷ ಅಬ್ದುಲ್ ಬಶೀರ್ ಗಂಜಿಮಠ, ಶಾಲಾ ಮುಖ್ಯ ಶಿಕ್ಷಕಿ ಗ್ರೆಟ್ಟಾ ಡೊಟ್ಟಿವಾಸ್, `ವಿಜಯವಾಹಿನಿ’ ಸಂಸ್ಥೆಯ ಸದಸ್ಯ ಜನಾರ್ದನ ಕುಲಾಲ್, ಶಾಲಾ ಶಿಕ್ಷಕರು, ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಇದ್ದರು. ಶಿಕ್ಷಕಿ ಸುಲತಾ ಕುಮಾರಿ ವಂದಿಸಿದರು.