ರೋಸಾಮಿಸ್ತಿಕಾ ಸಮೂಹ ಸಂಸ್ಥೆಗಳಿಂದ ೭೭ನೇ ಸ್ವಾತಂತ್ರ‍್ಯ ದಿನಾಚರಣೆ
ಕೈಕಂಬ: ರೋಸಾಮಿಸ್ತಿಕಾ ಸಮೂಹ ಸಂಸ್ಥೆಗಳಿಂದ ೭೭ನೇ ಸ್ವಾತಂತ್ರ‍್ಯ ದಿನಾಚರಣೆಯು ಆ.೧೫ರಂದು ಮಂಗಳವಾರ ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಸಾಮಿಸ್ತಿಕಾ ಸಮೂಹ ಸಂಸ್ಥೆಗಳ ಸಂಚಾಲಕರು ವಂ.ಭಗಿನಿ ಗ್ರೇಸಿ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ರೋಸಾಮಿಸ್ತಿಕಾ ಟಿ.ಟಿ.ಐಯ ಹಳೆ ವಿದ್ಯಾರ್ಥಿನಿ ಸುಲೋಚನಾ ಭಟ್ ಧ್ವಜಾರೋಹಣಗೈದು ಮಾತಾನಾಡಿ ದೇಶ ಸೇವೆಯೇ ಈಶ ಸೇವೆ ಎಂಬ ಸಂದೇಶವನ್ನು ನೀಡಿದರು. ದೇಶ ನಮಗೆ ಏನು ಕೊಟ್ಟಿದೆ? ಎನ್ನುವುದಕ್ಕಿಂತ ದೇಶಕ್ಕೆ ನಾವು ಎನು ಕೊಟ್ಟಿದ್ದೇವೆ? ಕೊಡಬಲ್ಲೆವು? ಎಂಬ ಆತ್ಮವಲೋಕನದ ನುಡಿಗಳ ಮೂಲಕ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ರೋಸಾಮಿಸ್ತಿಕಾ ಪ್ರಶಿಕ್ಷಣಾರ್ಥಿಗಳಿಂದ ಭಾರತದ ವೀರಸ್ಯೆನಿಕರ ವೀರಾವೇಷವನ್ನು ಬಿಂಬಿಸುವ ದೇಶಭಕ್ತಿ ನೃತ್ಯವನ್ನು ಪ್ರದರ್ಶಿಸಲಾಯಿತು. ಕಾರ್ಯಕ್ರಮದಲ್ಲಿ ರೋಸಾಮಿಸ್ತಿಕಾ ಕಾನ್ವೆಂಟಿನ ಸುಪೀರಿಯರ್ ವಂ. ಭ. ಲೀರಾ ಮರಿಯ, ಎಲ್ಲಾ ಸಮೂಹ ಸಂಸ್ಥೆಗಳ ಮುಖ್ಯಸ್ಥರು, ಕಾನ್ವೆಂಟಿನ ಭಗಿನಿಯರು, ಉಪನ್ಯಾಸಕ- ಉಪನ್ಯಾಸಕೇತರ ವರ್ಗ, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು