ಬಿ.ಸಿ.ರೋಡು- ಅಡ್ಡಹೊಳೆ ಹೆದ್ದಾರಿ ಕಾಮಗಾರಿ ಕಲ್ಲಡ್ಕ ಪೇಟೆ ಹಾಗೂ ಮೆಲ್ಕಾರ್ ಸಮಸ್ಯೆ ಆಲಿಸಿದ ಸಂಸದ ಮತ್ತು ಶಾಸಕರು : ಸೂಕ್ತ ಪರಿಹಾರಕ್ಕೆ ರಾ.ಹೆ.ಪ್ರಾ.ದ ಅಧಿಕಾರಿಗಳಿಗೆ ತಾಕೀತು
ಬಂಟ್ವಾಳ:ಕಾಮಗಾರಿ ಪ್ರಗತಿಯಲ್ಲಿರುವ ಬಿ.ಸಿ.ರೋಡು- ಅಡ್ಡಹೊಳೆ ರಾ.ಹೆ.ಯ ಕಲ್ಲಡ್ಕ ಪೇಟೆ ಹಾಗೂ ಮೆಲ್ಕಾರ್ ಅಸುಪಾಸಿನಲ್ಲಿ ಸಾರ್ವಜನಿಕರು ,ವರ್ತಕರು ಹಾಗೂ ಶಾಲಾ ಮಕ್ಕಳಿಗಾಗುತ್ತಿರುವ ಸಮಸ್ಯೆಯನ್ನು ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರು ಆಲಿಸಿ ಬಳಿಕ ಸೂಕ್ತ ಪರಿಹಾರಕ್ಕೆ ರಾ.ಹೆ.ಪ್ರಾ.ದ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಬಿ.ಸಿ.ರೋಡಿನ ರೈಲ್ವೇ ನಿಲ್ದಾಣದಲ್ಲಿ ಕಲ್ಲಡ್ಕ ವಲಯದ ಸಾರ್ವಜನಿಕರು ಮತ್ತು ವರ್ತಕರು ಮಾಜಿ ಶಾಸಕರಾದ ಎ.ರುಕ್ಮಯಪೂಜಾರಿ ,ಪದ್ಮನಾಭಕೊಟ್ಟಾರಿ,ಬಿಜೆಪಿ ನಾಯಕಿ ಸುಲೋಚನಾ ಜಿ.ಕೆ.ಭಟ್ ,ಕೃಷ್ಣಪ್ಪ ಪೂಜಾರಿ ದೋಟ,ನಿತಿನ್ ಕುಮಾರ್,ಮೋನಪ್ಪ ದೇವಸ್ಯ,ವಜ್ರನಾಭ ಕಲ್ಲಡ್ಕ ಮತ್ತಿತರ ಪ್ರಮುಖರ ನೇತೃತ್ವದ ನಿಯೋಗ ರಸ್ತೆ ಕಾಮಗಾರಿಯಿಂದ ಮಳೆ ಮತ್ತು ಬೇಸಿಗೆಯಲ್ಲಾಗುವ ಸಮಸ್ಯೆ,ಸರ್ವಿಸ್ ರಸ್ತೆ ನಿರ್ಮಿಸಿ ಡಾಮಾರೀಕರಣಗೊಳಿಸಬೇಕು,ಶಾಲಾ ಮಕ್ಕಳಿಗೆ ರಸ್ತೆ ದಾಟಲು ಅನುಕೂಲವಾಗುವಂತೆ ವ್ಯವಸ್ಥೆ,ಎರಡು ಕಡೆ ಬಸ್ ತಂಗುದಾಣ,ಪೂರ್ಲಿಪ್ಪಾಡಿ ಮತ್ರು ಕುದ್ರೆಬೆಟ್ಟಿನಲ್ಲಿಕ್ರಾಸಿಂಗ್ ಹಾಗೂ ಆಸ್ಪತ್ರೆಗೆ ತೆರಳಲು ತಾತ್ಕಲಿಕ ಪುಟ್ ಪಾತ್ ನಿರ್ಮಿಸಬೇಕು ಎಂದು ಮನವಿ ಮೂಲಕ ಸಂಸದರು ಹಾಗೂ ಶಾಸಕರನ್ನು ಒತ್ತಾಯಿಸಿದರು.

ಅದೇರೀತಿ ಮೆಲ್ಕಾರ್ ಸಿಟಿ ಉಳಿಸಿ ಹೋರಾಟ ಸಮಿತಿಯ ಗೌರವಾಧ್ಯಕ್ಷ ಡಾ.ಪ್ರಶಾಂತ್ ಮಾರ್ಲ,ಅಧ್ಯಕ್ಷ ಉದಯ ಪೈ,ಪದಾಧಿಕಾರಿಗಳಾದ ಎಂ.ಎನ್.ಕುಮಾರ್,ಸಂಜೀವಪೂಜಾರಿ ಬೊಳ್ಳಾಯಿ,ದಾಮೋದರ ಮೆಲ್ಕಾರ್,ಸತೀಶ್ ಪಿ.ಸಾಲಿಯಾನ್,ಕಿಶೋರ್ ಕುದ್ಮಲ್, ಯಂ.ಎಚ್.ಮುಸ್ತಾಫ,ಅಬ್ದುಲ್ ಬಶೀರ್ ಅಹ್ಮದ್ ಮೊದಲಾದವರ ನಿಯೋಗ ಸಂಸದರು,ಶಾಸಕರಿಗೆ ಮನವಿ ಸಲ್ಲಿಸಿ ಮೆಲ್ಕಾರ್ ನಲ್ಲಿ ಅವೈಜ್ಞಾನಿಕವಾಗಿ ಅಂಡರ್ ಪಾಸ್ ನಿರ್ಮಾಣದಿಂದಾಗಿ ಮೆಲ್ಕಾರ್ ಸಿಟಿ ವಿಭಜನೆಯಾಗಿ ಸಮಸ್ಯೆ ಉಂಟಾಗಲಿರುವುದರಿಂದ ಪ್ಲೈಓವರ್ ನಿರ್ಮಿಸುವ ಮೂಲಕ ಸಮಸ್ಯೆಯನ್ನು ಪರಿಹರಿಸುವಂತೆ ಒತ್ತಾಯಿಸಿದರು.
ಎರಡು ನಿಯೋಗದ ಸಮಸ್ಯೆಯನ್ನು ಆಲಿಸಿದ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಶಾಸಕ ರಾಜೇಶ್ ನಾಯ್ಕ್ ಅವರು ರಾ.ಹೆ.ಪ್ರಾ.ದ ಯೋಜನಾ ನಿರ್ದೇಶಕರಾದ ಅಬ್ದುಲ್ ಜಾವೇದ್ಅಜ್ಮಿ,ಸೈಟ್ ಇಂಜಿನಿಯರ್ ನವೀನ್ ಅವರೊಂದಿಗೆ ಚರ್ಚೆ ನಡೆಸಿ,ಕಲ್ಲಡ್ಕ ಪೇಟೆಯಲ್ಲಿ ಸಾರ್ವಜನಿಕರು,ವರ್ತಕರಿಗೆ ತೊಂದರೆಯಾಗದಂತೆ ಎರಡು ಟ್ಯಾಂಕರ್ ಅಲ್ಲೇ ಇರಿಸಿ ಧೂಳು ಬಾರದಂತೆ ಪ್ರತಿನಿತ್ಯ ಟ್ಯಾಂಕರ್ ಮೂಲಕ ನೀರು ಹಾಯಿಸಬೇಕು, ಸರ್ವಿಸ್ ರಸ್ತೆಯನ್ನು ಸೆಪ್ಟಂಬರ್ ಅಂತ್ಯದೊಳಗೆ ಡಾಮಾರೀಕರಣಗೊಳಿಸಬೇಕು,ಆಸ್ಪತ್ರೆಗೆ ಹೋಗುವ ನಿಟ್ಟಿನಲ್ಲಿ ತಾತ್ಕಾಲಿಕ ಪುಟ್ ಪಾತ್ ನಿರ್ಮಾಣಕ್ಕು ರಾ.ಹೆ.ಪ್ರಾ.ದ ಅಧಿಕಾರಿಗಳಿಗೆ ಸಂಸದರು ಸೂಚಿಸಿದರಲ್ಲದೆ ಈ ಬಗ್ಗೆ ಶಾಸಕರು ಮತ್ತು ತನಗೆ ವರದಿ ಸಲ್ಲಿಸುವಂತೆಯು ತಿಳಿಸಿದರು.
ಮೆಲ್ಕಾರ್ ಅಂಡರ್ ಪಾಸ್ ವಿಚಾರಕ್ಕೆ ಪರಿಶೀಲನೆ ನಡೆಸಿ ಸ್ಥಳೀಯರನ್ನು ವಿಶ್ವಾಸಕ್ಕೆ ಪಡೆದುಕೊಂಡು ಕ್ರಮಕೈಗೊಳ್ಳುವಂತೆ ಸೂಚಿಸಿದರು.
ಪ್ರಮುಖರಾದ ದೇವಪ್ಪ ಪೂಜಾರಿ, ಹರಿಕೃಷ್ಣ ಬಂಟ್ವಾಳ, ದೇವದಾಸ ಶೆಟ್ಟಿ ಬಂಟ್ವಾಳ, ರವೀಶ್ ಶೆಟ್ಟಿ ಕರ್ಕಳ,ರಾಮದಾಸ್ ಬಂಟ್ವಾಳ, ಸುದರ್ಶನ ಬಜ,ಗೋವಿಂದ ಪ್ರಭು,ಪುರುಷೋತ್ತಮ ಶೆಟ್ಟಿ ವಾಮದಪದವು,ಉದಯ ಕುಮಾರ್ ಕಾಂಜಿಲ,ಗಣೇಶ್ ರೈ ಮಾಣಿ,ವಜ್ರನಾಭ ಕಲ್ಲಡ್ಕ,ಸಂದೇಶ್ ಶೆಟ್ಟಿ,ಕೃಷ್ಣಪ್ಪ ಪೂಜಾರಿ ದೋಟ,ವಿಶ್ವನಾಥ ಚಂಡ್ತಿಮಾರ್,ಸಂದೀಪ್ ಕುಮಾರ್ ಮಾರ್ನಬೈಲ್,ಸೀತರಾಮ ಪೂಜಾರಿ ಮೊದಲಾದವರಿದ್ದರು.