ಟೆಂಪೋ ಚಾಲಕರ ಮತ್ತು ಮಾಲಕರ ಸಂಘದ ಮಹಾಸಭೆ
ಬಂಟ್ವಾಳ: ತಾಲೂಕು ದೊಡ್ಡ ಮತ್ತು ಸಣ್ಣ ಟೆಂಪೋ ಚಾಲಕರ ಮತ್ತು ಮಾಲಕರ ಸಂಘ (ರಿ) ಇದರ ಮಹಾಸಭೆಯು ತಾ 15/08/2023 ರಂದು ಶ್ರೀ ರಕ್ತೇಶ್ವರಿ ದೇವಸ್ಥಾನ ಇದರ ಸಭಾಂಗಣ ದಲ್ಲಿ ನಡೆದಿದ್ದು ಈ ಸಂಧರ್ಭದಲ್ಲಿ ವಕೀಲರಾದ ರಾಜೇಶ್ ಬೊಳ್ಳುಕಲ್ಲು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದು ಸದಸ್ಯರೆಲ್ಲರೂ ಒಗ್ಗಟ್ಟಿನಿಂದ ಸಂಘದ ಹಾಗೂ ಸದಸ್ಯರ ಅಭಿವೃದ್ದಿಗೆ ಶ್ರಮಿಸಬೇಕಾಗಿ ಕೇಳಿಕೊಂಡರು.
ಈ ಸಂಧರ್ಭದಲ್ಲಿ ಮುಖ್ಯ ಅಥಿತಿಯಾಗಿ ಪುರಸಭೆ ಮಾಜಿ ಸದಸ್ಯರಾದ ಲೋಕೇಶ್ ಸುವರ್ಣ ರವರು ಭಾಗವಹಿಸಿದ್ದರು. ಸಂಘದ ಉಪಾಧ್ಯಕ್ಷರಾಗಿ ನಾರಾಯಣ ಕುಲಾಲ್ ರವರು ಮರು ಆಯ್ಕೆ ಗೊಂಡಿದ್ದು ಕಾರ್ಯದರ್ಶಿಯಾಗಿ ಹರೀಶ್ ಬಂಟ್ವಾಳ ರವರು ಆಯ್ಕೆಗೊಂಡಿರುತ್ತಾರೆ. ಜತೆ ಕಾರ್ಯದರ್ಶಿಯಾಗಿ ರೋಬರ್ಟ್ ಮೆಲ್ಕಾರ್ ಕೋಶಾಧಿಕಾರಿಯಾಗಿ ಲತಿಫ್ ಬಿ ಸಿ ರೋಡ್ ರವರು ಆಯ್ಕೆಯಾಗಿರುತ್ತಾರೆ. ವಿವಿಧ ಕಾರ್ಯಕಾರಿ ಸಮಿತಿಯನ್ನು ರಚಿಸಲಾಗಿರುತ್ತದೆ. ಈ ಸಂಧರ್ಭದಲ್ಲಿ ಧರ್ಮಸ್ಥಳದ ಕುಮಾರಿ ಸೌಜನ್ಯಳ ಅತ್ಯಾಚಾರ ಹಾಗೂ ಕೊಲೆ ಕೇಸನ್ನು ಮರುತನಿಖೆ ಮಾಡುವ ಬಗ್ಗೆ ಹೋರಾಟಕ್ಕೆ ಬೆಂಬಲಿಸುವುದಾಗಿ ತೀರ್ಮಾಣಿಸಲಾಯಿತು. ಈ ಸಂಧರ್ಭದಲ್ಲಿ ಉಪಾಧ್ಯಕ್ಷರಾದ ನಾರಾಯಣ ಕುಲಾಲ್ ರವರು ಸ್ವಾಗತಿಸಿ ಹರೀಶ್ ರವರು ವಂದಿಸಿದರು.