“ಆಪತ್ಬಾಂಧವರಾಗಿ ಸಹಾಯಕ್ಕೆ ಬರುವವರೇ ಶೌರ್ಯ ವಿಪತ್ತು ನಿರ್ವಹಣಾ ಸದಸ್ಯರು”
ಬಂಟ್ವಾಳ: ಯಾವುದೇ ವಿಪತ್ತು ಬರುವುದು ಆಕಸ್ಮಿಕವಾಗಿ ಅಂತಹ ಸಂದರ್ಭದಲ್ಲಿ ಎಲ್ಲೋ ದೂರದಲ್ಲಿ ಇರುವ ಸಹಾಯಕರನ್ನು ಕರೆದು ಕಾಯುವಾಗ ಅವಘಡದ ತೀವ್ರತೆ ಹೆಚ್ಚಾಗಿ ಅನಾಹುತ ಸಂಭವಿಸುವ ಸಾಧ್ಯತೆ ಹೆಚ್ಚು ಆಗ ಆಪತ್ಬಾಂಧವರಾಗಿ ಸಹಾಯಕ್ಕೆ ಬರುವವರೇ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ಸದಸ್ಯರು.ಅಂತಹ ಸದಸ್ಯರಿಗೆ ಪ್ರಾಥಮಿಕ ಹಂತದಲ್ಲಿಯೇ ಸೂಕ್ತ ತರಬೇತಿ ನೀಡುವುದು ಅಗತ್ಯವಾಗಿದೆ ಎಂದು ಅಖಿಲ ಕರ್ನಾಟಕ ಜನಜಾಗೃತಿ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿನ್ಸೆಂಟ್ ಪಾಯಸ್ ರವರು ಹೇಳಿದ್ದಾರೆ.

ವಿಟ್ಲ ಯೋಜನಾ ಕಚೇರಿಯ ಸಭಾಂಗಣದಲ್ಲಿ ನಡೆದ ವಿಟ್ಲ ತಾಲೂಕು ಮಟ್ಟದ ವಿಪತ್ತು ನಿರ್ವಹಣಾ ಶೌರ್ಯ ಸದಸ್ಯರ ತರಬೇತಿ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಬಂಟ್ವಾಳ ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ರೋನಾಲ್ಡ್ ಡಿಸೋಜ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಗತಿ ಬಂದು ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟದ ಅಧ್ಯಕ್ಷರಾದ ನವೀನ್ ಚಂದ್ರ ವಹಿಸಿದ್ದರು.
ಈ ಸಂದರ್ಭ ಶೌರ್ಯ ತಂಡವು ನಿರ್ವಹಿಸುವ ನಿರ್ಣಯ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು ಹಾಗೂ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಕಲ್ಲಡ್ಕ ವಲಯ ತಂಡ ಪ್ರಥಮ, ಪೆರ್ನೆ ವಲಯ ಹಾಗೂ ವಿಟ್ಲ ವಲಯಕ್ಕೆ ತೃತೀಯ ಸ್ಥಾನದ ಪ್ರಶಸ್ತಿ ಪತ್ರ ವಿತರಿಸಲಾಯಿತು.
ವೇದಿಕೆಯಲ್ಲಿ ಯೋಜನೆಯ ದಕ್ಷಿಣ ಕನ್ನಡ ಜಿಲ್ಲೆ ಎರಡರ ನಿರ್ದೇಶಕರಾದ ಪ್ರವೀಣ್ ಕುಮಾರ್,ವಿಟ್ಲವಲಯ ಜನಜಾಗೃತಿ ವೇದಿಕೆಯ ವಲಯ ಅಧ್ಯಕ್ಷರಾದ ಕೃಷ್ಣಯ್ಯ ಬಲ್ಲಾಲ್ ಮೊದಲಾದವರು ಉಪಸ್ಥಿತರಿದ್ದರು.
ತರಬೇತಿ ಶಿಬಿರದಲ್ಲಿ ವಿಟ್ಲ ತಾಲೂಕಿಗೆ ಸಂಬಂಧಪಟ್ಟ 8 ವಲಯಗಳ ಶೌರ್ಯ ತಂಡದ ಮೇಲ್ವಿಚಾರಕರುಗಳು, ಸಂಯೋಜಕರುಗಳು, ಶೌರ್ಯ ಸಮಿತಿಯ ಸದಸ್ಯರುಗಳು ಭಾಗವಹಿಸಿದ್ದರು.
ಮಾಲತಿ ಪ್ರಾರ್ಥಿಸಿದರು. ವಿಟ್ಲ ತಾಲೂಕು ಯೋಜನಾಧಿಕಾರಿ ಚೆನ್ನಪ್ಪ ಗೌಡ ಸ್ವಾಗತಿಸಿದರು. ಶೌರ್ಯ ವಿಪತ್ ವಿಭಾಗದ ಯೋಜನಾಧಿಕಾರಿ ಜಯವಂತ್ ಪಟಗಾರ್ ವರದಿಯನ್ನು ವಾಚಿಸಿದರು, ವಲಯ ಮೇಲ್ವಿಚಾರಕಿ ಸರಿತಾ ವಿಟ್ಲ ತಾಲೂಕಿನ ಶೌರ್ಯ ತಂಡದ ಸಾಧನ ವರದಿ ಮಂಡಿಸಿದರು.ವಲಯ ಮೇಲ್ವಿಚಾರಕ ಗಂಗಾಧರ ವಂದಿಸಿದರು. ಯೋಜನೆಯ ವಿಟ್ಲ ತಾಲೂಕು ಕೃಷಿ ಅಧಿಕಾರಿ ಚಿದಾನಂದ ಕಾರ್ಯಕ್ರಮ ನಿರ್ವಹಿಸಿದರು.