ರೋಟರಿ ಕ್ಲಬ್ ಬಿ.ಸಿ.ರೋಡ್ ಸಿಟಿ ವತಿಯಿಂದ ‘ಆಟಿದ ಕೂಟ’ ಕಾರ್ಯಕ್ರಮ
ಬಂಟ್ವಾಳ :ರೋಟರಿ ಕ್ಲಬ್ ಬಿ.ಸಿ.ರೋಡ್ ಸಿಟಿ ವತಿಯಿಂದ ‘ಆಟಿದ ಕೂಟ’ ಕಾರ್ಯಕ್ರಮ ಬಿ.ಸಿ.ರೋಡಿನ ರೋಟರಿ ಭವನದಲ್ಲಿ ನಡೆಯಿತು.
ಡಿಸ್ಟ್ರಿಕ್ಟ್ ಪ್ರಾಜೆಕ್ಟ್ ಚೇರ್ಮನ್ ರೋ. ಸತೀಶ್ ಬೋಳಾರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,ಹಿಂದಿನ ಕಾಲದಲ್ಲಿ ಆಟಿ ತಿಂಗಳಲ್ಲಿ ಜನರು ಪಡುವಂತಹ ಕಷ್ಟ ಬವಣೆಗಳನ್ನು ವಿವರಿಸಿದರು.

ರೋಟರಿ ಸಿಟಿ ಅಧ್ಯಕ್ಷರಾದ ಪಿ.ಹೆಚ್.ಎಫ್ ಗಣೇಶ್ ಶೆಟ್ಟಿ ಸಭಾಧ್ಯಕ್ಷತೆ ವಹಿಸಿದ್ದರು.ರೋಟರಿ ಸಿಟಿ ಸ್ಥಾಪಕಾಧ್ಯಕ್ಷರಾದ ಎಂ.ಪಿ ಎಚ್.ಎಫ್ ಸತೀಶ್ ಕುಮಾರ್ ಕೆ, ಜಿಎಸ್ಆರ್ ಪಿ. ಎಚ್. ಎಫ್ ಪದ್ಮನಾಭ ರೈ, ಐ.ಪಿ.ಪಿ ಪಲ್ಲವಿ ಕಾರಂತ್, ಕಾರ್ಯದರ್ಶಿ ಮಧುಸೂಧನ್ ವೇದಿಕೆಯಲ್ಲಿದ್ದರು.
ರೋಟರಿ ಸದಸ್ಯರು ತಮ್ಮ ಮನೆಯಲ್ಲಿ ತಯಾರಿಸಿ ತಂದಿದ್ದ ವಿವಿಧ ಬಗೆಯ ತಿಂಡಿ ,ತಿನಸು್ಳನ್ನು ಉಣ ಬಡಿಸಲಾಯಿತು. ಗಾಯಕರಾದ ಭಾಸ್ಕರ್ ರಾವ್, ಪೃಥ್ವಿರಾಜ್, ಸುಂದರ್ ಬಂಗೇರ ಇವರು ತುಳು ಗೀತೆಗಳನ್ನು ಹಾಡಿ ರಂಜಿಸಿದರು.
ರೋ .ಸೇಸಪ್ಪ ಮಾಸ್ಟರ್ ಹಾಗೂ ಭಾರತೀ ಸೇಸಪ್ಪ ಕಾರ್ಯಕ್ರಮ ನಿರೂಪಿಸಿದರು.