ಉಳಿ ಶ್ರೀ ಪಂಚದುರ್ಗ ದೇವಿ ದೇವಸ್ಥಾನದ ಪರಿಸದಲ್ಲಿ ವನ ಮಹೋತ್ಸವ
ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಪೂಂಜಾಲಕಟ್ಟೆ ವಲಯದ ಉಳಿ ಶ್ರೀ ಪಂಚದುರ್ಗ ದೇವಿ ದೇವಸ್ಥಾನದ ಪರಿಸದಲ್ಲಿ ವನ ಮಹೋತ್ಸವ ಕಾರ್ಯಕ್ರಮ ನಡೆಯಿತು. ಬಂಟ್ವಾಳಜನಜಾಗೃತಿ ವೇದಿಕೆ ಅಧ್ಯಕ್ಷ ರೊನಾಲ್ಡ್ ಡಿ’ಸೋಜ ಅಮ್ಟಾಡಿ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಂಚದುರ್ಗ ದೇವಿದೇವಸ್ಥಾನದ ಆಡಳಿತ ಸಮಿತಿ ಉಪಾಧ್ಯಕ್ಷರಾದ ಮುತ್ತಪ್ಪ ಗೌಡರವರು ವಹಿಸಿದ್ದರು.
ಶ್ರೀ.ಕ್ಷೇ.ಧ.ಗ್ರಾ.ಯೋ.ಯ ಬಂಟ್ವಾಳ ತಾಲೂಕು ಯೋಜನಾಧಿಕಾರಿಯವರಾದ ಮಾಧವಗೌಡ ರವರು ಯೋಜನೆಯಿಂದ ಸಿಗುವ ಸೌಲಭ್ಯ ಹಾಗೂ ಪರಿಸರದ ಬಗ್ಗೆ ಮಾಹಿತಿ ನೀಡಿದರು.
ದೇವಸ್ಥಾನದ ಆಡಳಿತ ಸಮಿತಿಯ ಕೋಶಾಧಿಕಾರಿ ಸಂಜೀವ ಗೌಡ, ಬಂಟ್ವಾಳ ಕೇಂದ್ರ ಒಕ್ಕೂಟ ಅಧ್ಯಕ್ಷರಾದ ಚಿದಾನಂದ ರೈ ಕಕ್ಯ ,ದೇವಸ್ಥಾನದ ಕಾರ್ಯದರ್ಶಿ ರಾಮಕೃಷ್ಣ ರೈ ,ಹಾಗೂ ಉತ್ಸವ ಸಮಿತಿ ಅಧ್ಯಕ್ಷರಾದ ವಿಶ್ವನಾಥ್ ಬಿತ್ತ ಉಪಸ್ಥಿತ ರಿದ್ದರು.
ಬಳಿಕ ಉಳಿ “ಎ” ಮತ್ತು” ಬಿ” ಒಕ್ಕೂಟದ ಎಲ್ಲಾ ಪದಾಧಿಕಾರಿಗಳು , ಸದಸ್ಯರು ಗಿಡ ಗಳನ್ನು ನಾಟಿಮಾಡಿದರು. ಜ್ಞಾನವಿಕಾಸ ಸಮನ್ವಯದಿಕಾರಿ ಚಂದ್ರಮೋಹಿನಿ ಸ್ವಾಗತಿಸಿದರು.ಉಳಿ ಸೇವಾಪ್ರತಿನಿಧಿ ಶೇಖರ್ ವಂದಿಸಿದರು
ವಲಯದ ಮೇಲ್ವಿಚಾರಾದ ಅಶ್ವಿನಿ.ಜಿ ಕಾರ್ಯಕ್ರಮ ನಿರೂಪಿಸಿದರು.